alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗಾಂಧಿಯವರಿಗೆ ವಿಮಾನದಲ್ಲೇ ಎದುರಾಗಿತ್ತಾ ಅಪತ್ತು…?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ಪ್ರಾಣಾಪಾಯ ಎದುರಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 20 ಸೆಕೆಂಡ್ ಗಳ ಕಾಲ ತಡವಾಗಿದ್ದರು ಕಾಂಗ್ರೆಸ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ವಿಮಾನ ನೆಲಕ್ಕಪ್ಪಳಿಸುವ ಸಾಧ್ಯತೆ ಇತ್ತಂತೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಕಮಿಟಿಯನ್ನು ರಚಿಸಿ ತನಿಖೆ ನಡೆಸಿದ್ದು, ಕಮಿಟಿಯ ವರದಿ ಹಲವು ಆಘಾತಕಾರಿ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

ಆ ಪ್ರಕಾರ ಜೂನ್ ಏಪ್ರಿಲ್ 26ರಂದು ರಾಹುಲ್ ಗಾಂಧಿ ನವದೆಹಲಿಯಿಂದ ಹುಬ್ಬಳ್ಳಿಗೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನ ಚಾಲಕರ ನಿಯಂತ್ರಣಕ್ಕೆ ಸಿಕ್ಕಿಲ್ಲ. ಇನ್ನು 20 ಸೆಕೆಂಡ್ ತಡವಾಗಿದ್ದರು ವಿಮಾನ ನೆಲಕ್ಕಪ್ಪಳಿಸುವ ಸಂಭವ ಇತ್ತು.

ಆದ್ರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ಬಗ್ಗೆ ಅಂದೇ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತನಿಖೆ ನಡೆಸುವಂತೆ ಆದೇಶಿಸಲಾಗಿತ್ತು. ಆ ಪ್ರಕಾರ ದ್ವಿಸದಸ್ಯ ಸಮಿತಿ ತನಿಖೆ ಅಂತ್ಯಗೊಳಿಸಿದ್ದು ವಿಮಾನದ ಸಿಬ್ಬಂದಿ ತಡವಾಗಿ ಪ್ರತಿಕ್ರಿಯಿಸಿದ ಕಾರಣ ಈ ಘಟನೆ ನಡೆದಿದೆ ಅಂತ ಹೇಳಲಾಗ್ತಿದೆ. ಘಟನೆಯ ಬಗ್ಗೆ ಐದು ಅಂಶಗಳನ್ನ ತನಿಖಾ ತಂಡ ಸ್ಪಷ್ಟವಾಗಿ ನಮೂದಿಸಿದೆ.

ವಿಮಾನ ಒಂದು ಕಡೆಗೆ ವಾಲಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ವೇಳೆ ವಿಮಾನ ಆಟೋ ಪೈಲೆಟ್ ಮಾಡ್ ನಲ್ಲಿ ಚಲಿಸುತ್ತಿತ್ತು. ಆನಂತರದಲ್ಲಿ ವಿಮಾನವನ್ನು ಪೈಲೆಟ್ ಗಳ ಸಹಾಯದೊಂದಿಗೆ ಕಂಟ್ರೋಲ್ ಗೆ ತರಲಾಯ್ತು.

ಈ ವೇಳೆ ಸಿಬ್ಬಂದಿ ಪ್ರತಿಕ್ರಿಯಿಸೋದು ಸ್ವಲ್ಪ ನಿಧಾನವಾಗಿದೆ. 20 ಸೆಕೆಂಡು ವ್ಯತ್ಯಾಸವಾಗಿದ್ದರು ವಿಮಾನ ನೆಲಕ್ಕಪ್ಪಳಿಸುವ ಸಾಧ್ಯತೆ ಇತ್ತು ಅನ್ನೋ ವಿಚಾರಗಳು ಕಮಿಟಿ ವರದಿಯಲ್ಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...