alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ರಾಹುಲ್ ‘ಅಪ್ಪುಗೆ’ಯ ಹಿಂದಿನ ಗುಟ್ಟು

ಸಂಸತ್ ನಲ್ಲಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಮತ್ತೊಮ್ಮೆ ಇಡೀ ದೇಶದಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ರಾಹುಲ್ ಅಪ್ಪುಗೆ ಮತ್ತು ಕಣ್ಸನ್ನೆಯ ವಿಚಾರಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈಗ ವಿಚಾರ ಏನಪ್ಪಾ ಅಂದ್ರೆ ಮೋದಿಯವರನ್ನ ಅಪ್ಪಿಕೊಳ್ಳೋದಕ್ಕೆ ಹಲವು ತಿಂಗಳ ಹಿಂದಿನಿಂದಲೇ ರಾಹುಲ್ ಗಾಂಧಿ ತಯಾರಿ ನಡೆಸಿದ್ದರು. ಈ ಸಂಬಂಧ ಕಾಂಗ್ರೆಸ್ ನ ಇತರೆ ಸಂಸದರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದರು ಎಂಬ ವಿಷಯ ಕಾಂಗ್ರೆಸ್ ಮೂಲಗಳಿಂದಲೇ ತಿಳಿದು ಬಂದಿದೆ.

ಮೋದಿ ದೇಶದ ನಾನಾ ಕಡೆ ಭಾಷಣ ನಡೆಸುತ್ತಿದ್ದ ಸಂದರ್ಭದಲ್ಲಿ ತಮ್ಮ ಬಗ್ಗೆ ಹಾಗು ತಾಯಿ ಸೋನಿಯಾ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡುತ್ತಿದ್ದರು. ಕುಟುಂಬದ ಬಗ್ಗೆಯೂ ಅನೇಕ ಬಾರಿ ಅವರು ವ್ಯಂಗ್ಯವಾಡಿದ್ದರು. ಈ ಸಂಬಂಧ ಪ್ರಧಾನಿಯವರ ಬಾಯಿ ಮುಚ್ಚಿಸೋಕೆ ರಾಹುಲ್ ಮೂರರಿಂದ ನಾಲ್ಕು ತಿಂಗಳ ಹಿಂದೆಯೇ ಸಾರ್ವಜನಿಕವಾಗಿ ಅವರನ್ನು ಬಿಗಿದಪ್ಪುವ ಐಡಿಯಾ ಹಾಕಿದ್ದರಂತೆ.

ಅಪ್ಪುಗೆಯಿಂದ ಮೋದಿ ಮತ್ತು ರಾಹುಲ್ ನಡುವೆ ರಾಜಕೀಯ ಜಿದ್ದಾಜಿದ್ದಿಯಷ್ಟೇ ಉಳಿದಿರುತ್ತದೆ. ವೈಯಕ್ತಿಕ ಹಾಗು ಕೌಟುಂಬಿಕ ಟೀಕೆ ಟಿಪ್ಪಣಿಗಳನ್ನ ನಿಲ್ಲಿಸಬಹುದು ಅಂತ ರಾಹುಲ್ ಗಾಂಧಿ ಅಂದಾಜಿಸಿದ್ದರಂತೆ. ಈ ಬಗ್ಗೆ ಕೆಲ ತಿಂಗಳ ಹಿಂದೆ ಖಾಸಗಿ ಟಿವಿ ಷೋ ಒಂದರಲ್ಲಿ ರಾಹುಲ್ ಗಾಂಧಿ, ಮೋದಿಯವರು ತಮ್ಮ ಕುಟುಂಬದ ಬಗ್ಗೆ ಟೀಕೆ ಮಾಡಿದ್ರು ಆ ಬಗ್ಗೆ ನನಗೆ ಯಾವುದೇ ಕೋಪವಿಲ್ಲ ಅಂತ ರಾಹುಲ್ ಹೇಳಿದ್ದರಂತೆ.

ಆನಂತರದಲ್ಲಿ ಸಂಸತ್ ಅಧಿವೇಶನ ಶುರುವಿನಲ್ಲೇ ಹೀಗೊಂದು ನಾಟಕೀಯ ಬೆಳವಣಿಗೆ ನಡೆಯುವ ಸೂಚನೆಯನ್ನು ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದರಿಗೆ ನೀಡಿದ್ದರಂತೆ. ಮೋದಿ ಭಾಷಣದ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಪ್ರಧಾನಿಯವರನ್ನು ಬಿಗಿದಪ್ಪಿಕೊಳ್ಳೋದಾಗಿ ರಾಹುಲ್ ಮೊದಲೇ ತಿಳಿಸಿದ್ದರಂತೆ. ಹಾಗಾದ್ರೆ ರಾಹುಲ್ ಮೋದಿಯವರನ್ನು ಅಪ್ಪಿಕೊಂಡ ನಂತರದಲ್ಲಿ ತಮ್ಮ ಕುರ್ಚಿಗೆ ವಾಪಸ್ಸಾಗಿ ಕಣ್ಣು ಮಿಟುಕಿಸಿದ್ದರ ಹಿಂದಿನ ಗೂಡಾರ್ಥ ಇದೇನಾ ಅನ್ನೋ ಅನುಮಾನ ಈಗ ಎಲ್ಲರನ್ನೂ ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...