alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ನಲ್ಲಿ ರಾಹುಲ್ ಗಾಂಧಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕಚೇರಿಯಿಂದ ನಿರಾಕರಿಸಿದ್ದ ರಾಷ್ಟ್ರೀಯ ಧ್ವಜವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆ ಅಂಗವಾಗಿ 125 ಅಡಿ ಉದ್ದದ ಧ್ವಜ ತಯಾರಿಸಲಾಗಿದೆ. ಗುಜರಾತ್ ನಲ್ಲಿ ಪರಿಶಿಷ್ಟ ಸಮುದಾಯದ ಪರವಾಗಿ ಕಾರ್ಯನಿರ್ವಹಿಸುವ ನವಸರ್ಜನ್ ಟ್ರಸ್ಟ್ ನೇತೃತ್ವದಲ್ಲಿ 10 ರಾಜ್ಯಗಳಿಂದ ಆಗಮಿಸಿದ್ದ ಶಿಕ್ಷಕರು, ದಲಿತರು ಇದಕ್ಕಾಗಿ ಶ್ರಮಿಸಿದ್ದಾರೆ.

ಅಸ್ಪೃಶ್ಯತೆ ಹೋಗಲಾಡಿಸಬೇಕೆಂಬುದು ಸೇರಿದಂತೆ ವಿವಿಧ ಉದ್ದೇಶದಿಂದ 83.3 ಅಡಿ ಎತ್ತರ, 125 ಅಡಿ ಅಗಲದ ಬೃಹತ್ ಬಾವುಟವನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕಚೇರಿಗೆ ನೀಡಲು ಮುಂದಾದರೆ, ಅಧಿಕಾರಿಗಳು ಸ್ಥಳಾವಕಾಶದ ನೆಪವೊಡ್ಡಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಆಗಸ್ಟ್ 3 ರಂದು ಈ ಬೆಳವಣಿಗೆ ನಡೆದಿತ್ತು.

ಸದ್ಯ ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಅವರಿಗೆ ನವಸರ್ಜನ್ ಟ್ರಸ್ಟ್ ವತಿಯಿಂದ ಧ್ವಜವನ್ನು ನೀಡಲಾಗಿದ್ದು, ಅವರು ಇದನ್ನು ಸ್ವೀಕರಿಸಿದ್ದಾರೆ. ಸನಂದ ಬಳಿ ದಲಿತ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಧ್ವಜ ಸ್ವೀಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...