alex Certify
ಕನ್ನಡ ದುನಿಯಾ       Mobile App
       

Kannada Duniya

ಹರಿದ ಕುರ್ತಾ ಪ್ರದರ್ಶಿಸಿ ನಗೆಪಾಟಲಿಗೀಡಾದ ಯುವರಾಜ

rahul-torn-kurta

ರಾಹುಲ್ ಗಾಂಧಿ ಕಾಂಗ್ರೆಸ್ ನ ಯುವರಾಜ. ಹಲವು ವರ್ಷಗಳ ಕಾಲ ದೇಶವನ್ನು ಆಳಿದ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ. ಆದ್ರೆ ರಾಹುಲ್ ಬಳಿ ಒಂದೊಳ್ಳೆ ಕುರ್ತಾ ಖರೀದಿ ಮಾಡುವಷ್ಟು ಹಣವಿಲ್ಲವೇ? ಅಥವಾ ರಾಹುಲ್ ಅಷ್ಟು ಬಡವರೇ ಅನ್ನೋದು ಜನರ ಪ್ರಶ್ನೆ. ಯಾಕಂದ್ರೆ ಇತ್ತೀಚೆಗಷ್ಟೆ ಉತ್ತರಾಖಂಡ್ ಗೆ ರಾಹುಲ್ ಹರಿದು ಹೋಗಿದ್ದ ಕುರ್ತಾ ಧರಿಸಿ ಬಂದಿದ್ರು.

ಜೇಬಿನಲ್ಲಿ ಕೈಹಾಕಿ ಹರಿದ ಕುರ್ತಾ ಪ್ರದರ್ಶಿಸಿದ ರಾಹುಲ್ ಅಲ್ಲೂ ಪ್ರಧಾನಿ ಮೋದಿ ಅವರನ್ನು ತೆಗಳಿದ್ದಾರೆ. ‘ತಮಗೆ ಕುರ್ತಾ ಹರಿದು ಹೋಗಿದ್ರೂ ಯಾವುದೇ ವ್ಯತ್ಯಾಸವಾಗುವುದಿಲ್ಲ, ಆದ್ರೆ ಬಡವರ ಪರ ರಾಜಕೀಯ ಮಾಡುವುದಾಗಿ ಹೇಳಿಕೊಳ್ಳುವ ಪ್ರಧಾನಿ ಮೋದಿ ಅವರ ಕುರ್ತಾ ಒಮ್ಮೆಯೂ ಹರಿದಿರಲಿಕ್ಕಿಲ್ಲ’ ಅಂತಾ ರಾಹುಲ್ ಕಟಕಿಯಾಡಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ರಾಹುಲ್ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ವಿದೇಶಕ್ಕೆ ಹೋಗಲು ಹಣವಿದೆ, ಆದ್ರೆ ಒಂದು ಕುರ್ತಾ ಕೊಂಡುಕೊಳ್ಳಲು ಹಣವಿಲ್ವಾ? ರಾಹುಲ್ ನಮ್ಮನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸ್ತಿದ್ದಾರೆ ಅಂತಾ ಟ್ವಿಟ್ಟರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಬಡತನದ ನಾಟಕಕ್ಕೆ ಯಾರೂ ಮರುಳಾಗುವವರಿಲ್ಲ ಅಂತಾನೂ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ರಾಹುಲ್ ತಮಗೆ ತಾವೇ ಮುಜುಗರ ತಂದುಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...