alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ನೋಟೀಸ್

ಡಿಎಂಕೆ ನಾಯಕ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದ ವೇಳೆ ನಡೆದಿದ್ದ ಭದ್ರತಾ ಲೋಪ ಈಗ ಬಯಲಾಗಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ನಿನ್ನೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.

ಎ.ಪಿ. ಸೂರ್ಯಪ್ರಕಾಶಂ ಎಂಬ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ, ವಿಭಾಗೀಯ ಪೀಠ ಈ ಕುರಿತು ನೋಟೀಸ್ ಹೊರಡಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 14ಕ್ಕೆ ಮುಂದೂಡಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ರಾಜಾಜಿ ಹಾಲ್ ಬಳಿ ಕರುಣಾನಿಧಿ ಅಭಿಮಾನಿಗಳು ಜಮಾಯಿಸಿದ್ರು. ಈ ವೇಳೆ ಭದ್ರತಾ ಲೋಪವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಆಗಸ್ಟ್ 8 ರಂದು ರಾಹುಲ್ ಗಾಂಧಿ, ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ರಾಜಾಜಿ ಹಾಲ್ ಗೆ ಬಂದಿದ್ರು. ಆಗ ರಾಜಾಜಿ ಹಾಲ್ ನಲ್ಲಿ ಅಪಾರ ಪ್ರಮಾಣದ ಜನ ಸೇರಿ, ನೂಕುನುಗ್ಗಲು ಆಯಿತು. ಇದರ ಮಧ್ಯೆಯೇ ರಾಹುಲ್ ಗಾಂಧಿ ತಳ್ಳಿಕೊಂಡು ಬಂದಿದ್ದಾರೆ. ಈ ಪ್ರಕರಣದಲ್ಲಿ ಭದ್ರತಾ ಲೋಪ ಎದ್ದು ಕಾಣುತ್ತಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಇನ್ನು ಪೊಲೀಸ್ ಭದ್ರತಾ ಲೋಪದಿಂದ ರಾಜಾಜಿ ಹಾಲ್ ಬಳಿ ಕಾಲ್ತುಳಿತ ನಡೆಯಿತು. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...