alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರ ಸಾಲ ಮನ್ನಾಕ್ಕೆ ರಾಹುಲ್ ಹಣ ಎಲ್ಲಿಂದ ತರ್ತಾರೆ ಗೊತ್ತಾ…?

ಛತ್ತೀಸ್ ಘಡ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೃಷಿ ಸಾಲ ಮನ್ನಾ ಭರವಸೆ ನೀಡಿದ್ದಾರೆ. ಆದರೆ, ಈ ಸಾಲಮನ್ನಾಗೆ ಹಣವು ಅಂಬಾನಿ, ಮಲ್ಯ ನೀರವ್ ಮೋದಿ ಕಡೆಯಿಂದ ಬರುತ್ತದೆ ಎಂದು ಹೇಳಿದ್ದಾರೆ.

ಛತ್ತೀಸ್ ಘಡದಲ್ಲಿ ನಮ್ಮ ಸರ್ಕಾರ ರಚನೆಯಾದ ಹತ್ತೇ ದಿನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಭರವಸೆ ನೀಡಿದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಯವರು ಶ್ರೀಮಂತರನ್ನು ರಕ್ಷಿಸಿ ಬಡ ಜನರಿಗೆ ಕಿರುಕುಳ ನೀಡಿದರು. ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನರು ಹಿಂಸೆ ಪಡುವಂತಾಯಿತು ಎಂದರು.

ಪ್ರಧಾನಿ ಶ್ರೀಮಂತರ 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಬಗ್ಗೆ ಅವರು ಆಸಕ್ತಿ ವಹಿಸಿಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ಸಾಲ ಮನ್ನಾಗೆ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.

ಮಲ್ಯ, ನೀರವ್ ಮೋದಿ, ಅಂಬಾನಿಯವರಿಂದ ಹಣ ವಸೂಲಿ ಮಾಡಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ ಅವರು, ಮದ್ಯದ ದೊರೆ ಮಲ್ಯ 10 ಸಾವಿರ ಕೋಟಿ ಸಾಲ ಮಾಡಿ, ನೀರವ್ ಮೋದಿ 35 ಸಾವಿರ ಕೋಟಿ ಸಾಲ ಮಾಡಿ ದೇಶದಿಂದ ಪರಾರಿಯಾಗಿದ್ದಾರೆಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...