alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ಲರ್ ಸ್ಫೋಟ ಪ್ರಕರಣ : ರಾಯ್ಬರೇಲಿ ತಲುಪಿದ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಯ್ಬರೇಲಿ ತಲುಪಿದ್ದಾರೆ. ಎನ್ ಟಿಪಿಸಿ ಪವರ್ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಫೋಟಿಸಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೃತರ ಸಂಬಂಧಿಕರು ಹಾಗೂ ಗಾಯಾಳುಗಳನ್ನು ಭೇಟಿಯಾಗಲು ರಾಹುಲ್ ರಾಯ್ಬರೇಲಿಗೆ ತೆರಳಿದ್ದಾರೆ.

ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಎರಡನೇ ದಿನವಾದ ಇಂದು ಸೂರತ್ ನಿಂದಲೇ ನೇರವಾಗಿ ರಾಯ್ಬರೇಲಿಗೆ ಬಂದಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಣೆ ಮಾಡಿದ ರಾಹುಲ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಇದಕ್ಕೂ ಮೊದಲು ಘಟನೆ ಬಗ್ಗೆ ಟ್ವೀಟರ್ ಮಾಡಿದ ರಾಹುಲ್ ಗಾಂಧಿ, ಬಾಯ್ಲರ್ ಗೆ ಒತ್ತಡ ಹೆಚ್ಚಾಗಿ ಈ ದುರ್ಘಟನೆ ಸಂಭವಿಸಿದೆ ಎಂದಿದ್ದರು. ಘಟನೆಗೆ ವಿಷಾದ ವ್ಯಕ್ತಪಡಿಸಿದ್ದರು.

ಇನ್ನು ಸಂಸದೀಯ ಕ್ಷೇತ್ರದಲ್ಲಿ ನಡೆದ ದುರ್ಘಟನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...