alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿಯಲ್ಲಿ ನೆಲಗಡಲೆ ಖರೀದಿ ಮಾಡಿದ ರಾಹುಲ್

rahul-gandhi-with-theli-wala_1484589831

ಶಿವಶಂಕರ್ ಎಂದೂ ಇಂತ ದಿನ ಬರುತ್ತೆ ಎಂದು ಯೋಚನೆ ಮಾಡಿರಲಿಲ್ಲ. ತನ್ನ ಅಂಗಡಿ ಮುಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದು ನಿಲ್ತಾರೆ ಜೊತೆಗೆ 50 ರೂಪಾಯಿ ನೆಲಗಡಲೆ ಕೇಳ್ತಾರೆ ಎಂದು ಎಂದೂ ಶಿವಶಂಕರ್ ಅಂದುಕೊಂಡಿರಲಿಲ್ಲ. ಆದ್ರೆ ಶಿವಶಂಕರ್ ಗೆ ಶುಭ ದಿನ ಬಂದೇ ಬಿಡ್ತು.

ಡೆಹ್ರಾಡೂನ್ ನ ನಟರಾಜಾ ಚೌಕದಲ್ಲಿ ತಳ್ಳುವ ಗಾಡಿಯಲ್ಲಿ ನೆಲಗಡಲೆ, ಸ್ವೀಟ್ ಇಟ್ಟುಕೊಂಡಿರುವ ಶಿವಶಂಕರ್ ಗಾಡಿ ಮುಂದೆ ಕಪ್ಪು ಬಣ್ಣದ ಐಷಾರಾಮಿ ಕಾರೊಂದು ಬಂದು ನಿಲ್ತು. ಅದ್ರಿಂದ ರಾಹುಲ್ ಗಾಂಧಿ ಕೆಳಗಿಳಿದ್ರು. ಅವರನ್ನು ನೋಡ್ತಾ ಇದ್ದಂತೆ ಶಿವಶಂಕರ್ ಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅವ್ರ ಹಿಂದೆಯೇ ಮುಖ್ಯಮಂತ್ರಿ ಹರೀಶ್ ರಾವತ್ ಕೂಡ ಬಂದ್ರು.

ಶಿವಶಂಕರ್ ಬಳಿ ಬಂದ ರಾಹುಲ್ 50 ರೂಪಾಯಿ ನೆಲಗಡಲೆ ಕೇಳಿದ್ದಾರೆ. ಹಿಂದೆ ಬಂದ ಹರೀಶ್, ರಾಹುಲ್ ತೋರಿಸಿ ಇವರ್ಯಾರು ಗೊತ್ತಾ ಎಂದು ಶಿವಶಂಕರ್ ಅವರನ್ನು ಕೇಳಿದ್ದಾರೆ. ಶಿವಶಂಕರ್ ಗೊತ್ತು. ಸೋನಿಯಾ ಗಾಂಧಿ ಮಗ ಎಂದಿದ್ದಾನೆ.

ನಂತ್ರ ನೆಲಗಡಲೆ ಪಡೆದ ರಾಹುಲ್ 50 ರೂಪಾಯಿ ನೀಡಿ, ಯಾರಿಗೆ ವೋಟ್ ಹಾಕ್ತೀಯಾ ಅಣ್ಣಾ ಎಂದಿದ್ದಾರೆ. ಈ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾನೆ ಶಿವಶಂಕರ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...