alex Certify
ಕನ್ನಡ ದುನಿಯಾ       Mobile App
       

Kannada Duniya

ತರಬೇತುದಾರ ಬಹಿರಂಗಪಡಿಸಿದ್ದಾರೆ ರಾಹುಲ್ ರಹಸ್ಯ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಪಾನ್ ನ ಮಾರ್ಷಲ್ ಆರ್ಟ್ಸ್ ಐಕಿಡೋನಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ ಅನ್ನೋದು ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಯಾಗ್ತಿದೆ. ಇದೀಗ ರಾಹುಲ್ ಗಾಂಧಿಗೆ ಮಾರ್ಷಲ್ ಆರ್ಟ್ಸ್ ಕಲಿಸಿದ ಕೋಚ್ ಸೆನ್ಸಿ ಪೆರಿಟೋಸ್ ಕರ್ ಕೂಡ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

2009ರಲ್ಲಿ ಮೊದಲ ಬಾರಿ ಸೆನ್ಸಿ, ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರಂತೆ. ಆಗಿನಿಂದ್ಲೂ ಒಟ್ಟಿಗೆ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡ್ತಿದ್ದಾರಂತೆ. ಆದ್ರೆ ಕಳೆದ ಮೂರು ತಿಂಗಳಿನಿಂದ ಭೇಟಿಯಾಗಿಲ್ಲ ಎನ್ನುತ್ತಾರೆ ಸೆನ್ಸಿ. ತಮ್ಮ ಇಬ್ಬರು ಸ್ನೇಹಿತರ ಜೊತೆಗೆ ಯುವರಾಜ ಅಭ್ಯಾಸಕ್ಕಾಗಿ ಬರುತ್ತಿದ್ದರಂತೆ.

ಅಷ್ಟೇ ಅಲ್ಲ ಈ ಟ್ರೈನಿಂಗ್ ಸೆಶನ್ ವೀಕ್ಷಿಸಲು ಆಗಾಗ ಪ್ರಿಯಾಂಕಾ ವಾದ್ರಾ ಕೂಡ ವಿಸಿಟ್ ಕೊಡುತ್ತಿದ್ರು. 2013ರಲ್ಲಿ ಐಕಿಡೋ ಮಾಸ್ಟರ್ ಜಪಾನ್ ನಿಂದ ಭಾರತಕ್ಕೆ ಬಂದಿದ್ರು. ಆಗ ಟೆಸ್ಟ್ ಪಾಸ್ ಮಾಡಿದ ರಾಹುಲ್ ಗಾಂಧಿ ಬ್ಲಾಕ್ ಬೆಲ್ಟ್ ಸಂಪಾದಿಸಿದ್ದಾರಂತೆ.

ಜಪಾನ್ ನ ಮುಖ್ಯ ಕಚೇರಿಗೂ ಭೇಟಿ ನೀಡಿದ್ದ ರಾಹುಲ್ ಅಲ್ಲಿ 10 ದಿನ ತಂಗಿದ್ದರು. ಕೇವಲ ಜಪಾನ್ ಮಾರ್ಷಲ್ ಆರ್ಟ್ಸ್ ಐಕಿಡೋ ಮಾತ್ರವಲ್ಲ ಬ್ರೆಜಿಲ್ ನ ಜಿಯು-ಜಿಟ್ಸು ಕಲೆಯನ್ನೂ ಯುವರಾಜ ಕಲಿತಿದ್ದಾರೆ. ಅಷ್ಟೇ ಅಲ್ಲ ಕತ್ತಿ ವರಸೆಯಲ್ಲೂ ರಾಹುಲ್ ಪ್ರವೀಣರು ಅನ್ನೋದನ್ನು ಅವರ ತರಬೇತುದಾರರೇ ಬಹಿರಂಗಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...