alex Certify
ಕನ್ನಡ ದುನಿಯಾ       Mobile App
       

Kannada Duniya

ಅಷ್ಟಕ್ಕೂ ರಾಹುಲ್ ಗಾಂಧಿ ಬ್ಯಾಗಿನಲ್ಲಿರೋದೇನು?

ಗುಜರಾತ್ ಚುನಾವಣೆ ಹತ್ತಿರ ಬರ್ತಿದೆ. ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನಲ್ಲಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅನೇಕ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದ್ರೆ ರಾಹುಲ್ ಗಿಂತ ರಾಹುಲ್ ಬೆನ್ನಿನ ಮೇಲಿದ್ದ ಬ್ಯಾಗ್ ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಭದ್ರತೆಯಲ್ಲಿರುವ ರಾಜಕಾರಣಿಗಳ ಹೆಗಲಿಗೆ ಬ್ಯಾಗ್ ಕಾಣೋದಿಲ್ಲ. ಆದ್ರೆ ರಾಹುಲ್ ಗಾಂಧಿ ಕಪ್ಪು ಬಣ್ಣದ ಬ್ಯಾಗ್ ಹೆಗಲಿಗೆ ಹಾಕಿ ತಿರುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಬ್ಯಾಗ್ ಚರ್ಚೆಯ ವಿಷ್ಯವಾಗಿದೆ. ಕೆಲವರು ರಾಹುಲ್ ಬ್ಯಾಗ್ ಡ್ರಾಮಾ ಎಂದ್ರೆ ಮತ್ತೆ ಕೆಲವರು ರಾಹುಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ರಾಹುಲ್ ಬ್ಯಾಗ್ ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ವರದಿ ಪ್ರಕಾರ ರಾಹುಲ್ ಗಾಂಧಿ ಬ್ಯಾಗ್ ನಲ್ಲಿ ಬಟ್ಟೆ ಹಾಗೂ ದೈನಂದಿನ ಜೀವನಕ್ಕೆ ಬೇಕಾಗುವ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದಾರಂತೆ. ಮೊಬೈಲ್ ಜಾರ್ಜರ್ ಸೇರಿದಂತೆ ಅವಶ್ಯಕ ವಸ್ತುಗಳು ಇದ್ರಲ್ಲಿವೆಯಂತೆ. ಗುಜರಾತ್ ಚುನಾವಣಾ ಪ್ರಚಾರಕ್ಕಿಳಿದಿರುವ ರಾಹುಲ್ ನಿಮ್ಮಲ್ಲಿ ನಾನೊಬ್ಬ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ. ಹಾಗಾಗಿ ಸಾಮಾನ್ಯರ ಜೊತೆ ಫೊಟೋ ತೆಗೆಸಿಕೊಳ್ಳುವುದು, ಸಾಮಾನ್ಯರ ಜೊತೆ ಕುಳಿತು ಆಹಾರ ಸೇವನೆ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...