alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲಿನ ನಂತ್ರ ಮೋದಿಗೆ ರಾಹುಲ್ ಸಂದೇಶ

ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶದ ನಂತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ. ಮಂಗಳವಾರ ಸಂಸತ್ ಭವನದ ಮುಂದೆ ಮಾತನಾಡಿದ ರಾಹುಲ್ ಕೋಪ ಯಾವುದೇ ಕೆಲಸಕ್ಕೂ ಬರುವುದಿಲ್ಲ. ಪ್ರೀತಿ ಕೆಲಸ ಮಾಡುತ್ತದೆ ಎಂದು ಮೋದಿ ಹಾಗೂ ಬಿಜೆಪಿಗೆ ಗುಜರಾತ್ ಜನ ಸಂದೇಶ ನೀಡಿದ್ದಾರೆ ಎಂದಿದ್ದಾರೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತ್ರ ಮಾಧ್ಯಮದವರ ಜೊತೆ ರಾಹುಲ್ ಮಾತನಾಡಿದ್ರು. ಗುಜರಾತ್ ಜನರಿಗೆ ಮೋದಿ ಮಾದರಿ ಇಷ್ಟವಾಗಿಲ್ಲ. ಮೋದಿ ಅಭಿವೃದ್ಧಿ ಟೊಳ್ಳು. ಮೋದಿ ಪ್ರಚಾರ ಹಾಗೂ ಮಾರ್ಕೆಟಿಂಗ್ ಚೆನ್ನಾಗಿ ಮಾಡ್ತಾರೆ. ಆದ್ರೆ ಇದು ಜನರಿಗೆ ಇಷ್ಟವಾಗಿಲ್ಲ. ಗುಜರಾತ್ ಫಲಿತಾಂಶ ಬಿಜೆಪಿಗೆ ಆಘಾತ ತಂದಿದೆ. ಆದ್ರೆ ನಮಗೆ ಒಳ್ಳೆಯ ಸಂದೇಶ ಸಿಕ್ಕಿದೆ ಎಂದು ರಾಹುಲ್ ಹೇಳಿದ್ದಾರೆ.

ಅಭಿವೃದ್ಧಿ ಬಗ್ಗೆ ಮೋದಿಗೆ ಪ್ರಶ್ನೆ ಕೇಳಿದ್ದೆ. ಜೈ ಷಾ-ರಾಫೆಲ್ ಬಗ್ಗೆ ಕೇಳಿದ್ದ ಪ್ರಶ್ನೆಗೆ ಮೋದಿ ಉತ್ತರ ನೀಡಿಲ್ಲ. ನಾವು ಗುಜರಾತ್ ನಲ್ಲಿ ಗೆಲುವು ಸಾಧಿಸಬಹುದಿತ್ತು. ಆದ್ರೆ ಸಣ್ಣ ಕೊರತೆ ಕಾಣಿಸಿದೆಯಷ್ಟೆ. ಆದ್ರೆ ಮೋದಿ ವಿಶ್ವಾಸಾರ್ಹತೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಮೋದಿ ಹೇಳಿದ ಮಾತನ್ನು ಪಕ್ಷದ ಕಾರ್ಯಕರ್ತರು ಪುನರಾವರ್ತನೆ ಮಾಡುತ್ತಿದ್ದಾರೆಯೇ ಹೊರತು ಜನರಲ್ಲವೆಂದು ರಾಹುಲ್ ಕಿಡಿಕಾರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...