alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಜಾಕೆಟ್ ತೊಟ್ಟು ಇಕ್ಕಟ್ಟಿಗೆ ಸಿಲುಕಿದ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದುಬಾರಿ ಜಾಕೆಟ್ ಈಗ ಭಾರೀ ಸುದ್ದಿ ಮಾಡ್ತಿದೆ. ‘ಸೂಟ್ ಬೂಟ್ ಕಿ ಸರ್ಕಾರ್’ ಅಂತಾ ಪ್ರಧಾನಿ ಮೋದಿ ಅವರನ್ನು ಹೀಯಾಳಿಸುತ್ತಿದ್ದ ಯುವರಾಜ ಈಗ ಟ್ವಿಟ್ಟರ್ ನಲ್ಲಿ ತಾವೇ ಟ್ರೋಲ್ ಗೆ ತುತ್ತಾಗಿದ್ದಾರೆ.

ಮೇಘಾಲಯದಲ್ಲಿ ನಡೆದ ‘ಸೆಲೆಬ್ರೇಶನ್ ಆಫ್ ಪೀಸ್’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ದುಬಾರಿ ಜಾಕೆಟ್ ತೊಟ್ಟು ಬಂದಿದ್ರು. ಇದು ಟ್ವಿಟ್ಟರ್ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೊಮ್ಮೆ ಹರಿದ ಕುರ್ತಾ ತೊಟ್ಟು ರಾಹುಲ್ ‘ಗರೀಬೋಂಕಿ ಸರ್ಕಾರ್’ ಅಂತೆಲ್ಲಾ ಬಿಂಬಿಸಿಕೊಂಡಿದ್ರು.

ಆ ದಿನಗಳನ್ನು ರಾಗಾಗೆ ಜನರು ಮತ್ತೆ ನೆನಪಿಸಿದ್ದಾರೆ. ಆದ್ರೆ ಈ ದುಬಾರಿ ಜಾಕೆಟ್ ಅನ್ನು ರಾಹುಲ್ ಗಾಂಧಿ ಖರೀದಿ ಮಾಡಿಲ್ಲ, ಅದು ಉಡುಗೊರೆಯಾಗಿ ಬಂದಿದ್ದು ಅಂತಾ ಕಾಂಗ್ರೆಸ್ ಸಮರ್ಥಿಸಿಕೊಳ್ತಿದೆ. ಅದೇನೇ ಆದ್ರೂ ಒಬಾಮಾ ಭೇಟಿ ವೇಳೆ ತಮ್ಮ ಹೆಸರಿದ್ದ ಸೂಟ್ ಧರಿಸಿದ್ದ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್, ಈಗ ತಾವೇ ದುಬಾರಿ ಜಾಕೆಟ್ ತೊಟ್ಟು ಟೀಕೆಗೆ ಗುರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...