alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ನಿಂದ ಬಯಲಾಯ್ತು ಕೋಟ್ಯಾಧಿಪತಿ ರಹಸ್ಯ

ನವದೆಹಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ, ಶ್ರೀಮಂತ ಉದ್ಯಮಿ ಎಂಬ ಸಂಗತಿ ಆಧಾರ್ ಕಾರ್ಡ್ ನಿಂದ ಬಯಲಾಗಿದೆ.

ರಾಯ್ಪರದಲ್ಲಿ ಸ್ವಾಮಿ ಭಾಸ್ಕರ್ ಸ್ವರೂಪ್ ಜಿ ಮಹಾರಾಜ್ ಅವರು ಆಶ್ರಮವನ್ನು ನಡೆಸುತ್ತಾರೆ. ರಾಯ್ಪುರದಲ್ಲಿ ಬಹಳ ದಿನಗಳಿಂದ ಭಿಕ್ಷೆ ಬೇಡುತ್ತಿದ್ದ ಹಿರಿಯ ವ್ಯಕ್ತಿಯನ್ನು ಗಮನಿಸಿದ ಅವರು, ತಮ್ಮ ಆಶ್ರಮಕ್ಕೆ ಕರೆದುಕೊಂಡು ಬಂದು ಹಸಿದಿದ್ದ ಅವರಿಗೆ ಊಟ ಕೊಟ್ಟಿದ್ದಾರೆ.

ಊಟ ನೀಡಿದ ನಂತರದಲ್ಲಿ ಅವರಿಗೆ ಸ್ನಾನ ಮಾಡಿಸುವಂತೆ ಆಶ್ರಮವಾಸಿಗಳಿಗೆ ಹೇಳಿದ್ದು, ಅದರಂತೆ ಅವರಿಗೆ ಸ್ನಾನ ಮಾಡಿಸುವ ವೇಳೆ, ಬಟ್ಟೆಯಲ್ಲಿ ಆಧಾರ್ ಕಾರ್ಡ್ ಮತ್ತು ಕೋಟ್ಯಂತರ ರೂ. ಹಣವನ್ನು ಹೂಡಿಕೆ ಮಾಡಿದ್ದ ದಾಖಲೆ ಕಂಡು ಬಂದಿವೆ.

ಆಧಾರ್ ಕಾರ್ಡ್ ಮಾಹಿತಿ ಆಧರಿಸಿ ಅವರ ವಿಳಾಸವನ್ನು ಪತ್ತೆ ಮಾಡಿ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಭಿಕ್ಷುಕನಾಗಿದ್ದ ವ್ಯಕ್ತಿ ತಮಿಳುನಾಡಿನ ತಿರುನಲ್ವೇಲಿಯ ಶ್ರೀಮಂತ ಉದ್ಯಮಿ ಮುತ್ತಯ್ಯ ನಾಡಾರ್ ಎಂಬುದು ಗೊತ್ತಾಗಿದೆ. ಅವರ ಕುಟುಂಬದವರು ಆಗಮಿಸಿ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅವರಿಗೆ ಆಗುಂತುಕರು ಇಂಜೆಕ್ಷನ್ ನೀಡಿದ್ದರಿಂದ ಸ್ಮರಣಶಕ್ತಿ ಕಳೆದುಕೊಂಡಿದ್ದರು. ಆಧಾರ್ ಕಾರ್ಡ್ ನಿಂದ ಮರಳಿ ಕುಟುಂಬವನ್ನು ಸೇರಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...