alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಾದ್ರು ರಾಧೇ ಮಾ

radhe-maaಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ, ಮಾಧ್ಯಮಗಳಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿಯೂ ಕೂಡಾ ಅವರು ವಿವಾದದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮಿನಿ ಸ್ಕರ್ಟ್, ಡ್ಯಾನ್ಸ್ ನಿಂದಾಗಿ ಈ ಹಿಂದೆ ವಿವಾದ ಹುಟ್ಟು ಹಾಕಿದ್ದ ರಾಧೇ ಮಾ, ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಗಿ ಬಂದಿತ್ತು.

ಈ ಎಲ್ಲ ವಿವಾದಗಳಿಂದ ಹೊರ ಬಂದಿದ್ದ ರಾಧೇ ಮಾ, ಕಳೆದ ಬಾರಿಯ ‘ಬಿಗ್ ಬಾಸ್’ ನಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗಿತ್ತು. ವಿಮಾನ ಪ್ರಯಾಣದ ವೇಳೆ ತ್ರಿಶೂಲ ಹಿಡಿದುಕೊಂಡು ಪ್ರಯಾಣಿಸಿದ್ದರೆಂಬ ಕಾರಣಕ್ಕೆ ಸಹ ಪ್ರಯಾಣಿಕರ ಆಕ್ರೋಶಕ್ಕೂ ರಾಧೇ ಮಾ ತುತ್ತಾಗಿದ್ದರು.

ಕಳೆದ ಕೆಲ ತಿಂಗಳುಗಳಿಂದ ಸುದ್ದಿಯಲ್ಲಿ ಇರದಿದ್ದ ರಾಧೇ ಮಾ, ಶನಿವಾರದಂದು ಹರಿದ್ವಾರದ ಗಂಗಾ ನದಿ ತೀರದಲ್ಲಿರುವ ಪವಿತ್ರ ಸ್ಥಳ ಹರ್ ಕೀ ಪೌರಿ ಘಾಟ್ ಗೆ ಚಪ್ಪಲಿ ಧರಿಸಿಕೊಂಡು ಹೋಗಿ ಪೂಜೆ ನೆರವೇರಿಸುವ ಮೂಲಕ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಇಲ್ಲಿಗೆ ಭೇಟಿ ಕೊಟ್ಟಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೇ ತಮ್ಮ ಶೂ ಕಳಚಿ ಪ್ರವೇಶಿಸಿದ್ದು, ರಾಧೇ ಮಾ ಇಲ್ಲಿನ ನಿಯಮಾವಳಿಗಳನ್ನು ಮುರಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮುಂದೆ ರಾಧೇ ಮಾ, ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲವೆಂದು ಯುವ ತೀರ್ಥ್ ಪುರೋಹಿತ್ ಮಹಾಸಭಾದ ಅಧ್ಯಕ್ಷ ಉಜ್ವಲ್ ಪಂಡಿತ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...