alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ಸ್ವಲ್ಪದರಲ್ಲೇ ತಪ್ಪಿದೆ ವಿಮಾನಗಳ ಡಿಕ್ಕಿ

indigo-spicejet

ಅಹಮದಾಬಾದ್: ಅಹಮದಾಬಾದ್ ಏರ್ ಪೋರ್ಟ್ ನಲ್ಲಿ ಸಂಭವಿಸಬಹುದಾಗಿದ್ದ, ಭಾರೀ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ.

ಏರ್ ಟ್ರಾಫಿಕ್ ಕಂಟ್ರೋಲ್ ರೂಂ(ಎ.ಟಿ.ಸಿ.) ಸಿಬ್ಬಂದಿ ನೀಡಿದ ತುರ್ತು ಸಂದೇಶ ಮತ್ತು ಅದನ್ನು ಪಾಲಿಸಿದ ಪೈಲಟ್ ಕಾರಣದಿಂದ ನೂರಾರು ಮಂದಿ ಬಚಾವ್ ಆಗಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ್ದ ಇಂಡಿಗೋ ಏರ್ ಲೈನ್ಸ್ 6 ಇ-166 ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಆದರೆ ರನ್ ವೇನಲ್ಲಿ ಇಳಿದ ವಿಮಾನ ಟ್ಯಾಕ್ಸಿ ವೇ ತಲುಪಿರಲಿಲ್ಲ. ಇಲಿಗಳು ಕಾಣಿಸಿಕೊಂಡಿದ್ದ ಕಾರಣ, ಸ್ವಲ್ಪ ಟೈಮ್ ಕೊಡಿ ಎಂದು ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಹಮದಾಬಾದ್ ನಿಂದ ದೆಹಲಿಗೆ 142 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ಎಸ್.ಜಿ 912 ವಿಮಾನ ಪ್ರಯಾಣ ಬೆಳೆಸಿದೆ. ಪೈಲಟ್ ಅನುಮತಿ ಕೋರಿ ಎ.ಟಿ.ಸಿ.ಗೆ ಸಂದೇಶ ಕಳುಹಿಸಿದ್ದಾರೆ. ಈ ಮಧ್ಯೆ ಇಂಡಿಗೋ ಏರ್ ಲೈನ್ಸ್ ನಿಂದ ಸಂದೇಶ ಬಂದಿದ್ದ ಕಾರಣ, ಎ.ಟಿ.ಸಿ. ಸಿಬ್ಬಂದಿ ಟೇಕಾಫ್ ಗೆ ಸ್ಪೈಸ್ ಜೆಟ್ ಗೆ ಅನುಮತಿ ನೀಡಿದ್ದಾರೆ.

ಆದರೆ, ಇಂಡಿಗೋ ವಿಮಾನ ಟ್ಯಾಕ್ಸಿ ವೇ ತಲುಪಿದ್ದರೂ, ಅದರ ತುದಿ ಇನ್ನೂ ರನ್ ವೇನಲ್ಲೇ ಉಳಿದಿರುವುದು ಗಮನಕ್ಕೆ ಬಂದಿದೆ. ಎ.ಟಿ.ಸಿ. ಸಿಬ್ಬಂದಿ ಕೂಡಲೇ ವಿಮಾನ ನಿಲ್ಲಿಸುವಂತೆ, ಸ್ಪೈಸ್ ಜೆಟ್ ಪೈಲಟ್ ಗೆ ಸಂದೇಶ ಕಳಿಸಿದ್ದಾರೆ. ಆಗ ಪೈಲಟ್ ವಿಮಾನ ನಿಲ್ಲಿಸಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ. ಘಟನೆಯ ತನಿಖೆ ನಡೆಸಿ ವರದಿ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...