alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ಶೋನಲ್ಲಿ ಹಾವಾಡಿಗನನ್ನೇ ನುಂಗಲು ಯತ್ನಿಸಿದೆ ಹೆಬ್ಬಾವು

ಉತ್ತರ ಪ್ರದೇಶದಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಹೆಬ್ಬಾವೊಂದು ಹಾವಾಡಿಗನನ್ನೇ ನುಂಗಿ ಹಾಕಲು ಪ್ರಯತ್ನಿಸಿದೆ. ಹಾವಾಡಿಗನೊಬ್ಬ ಹೆಬ್ಬಾವು ತೆಗೆದುಕೊಂಡು ಬಂದಿದ್ದ. ಅದನ್ನು ಆಡಿಸುವ ಮೂಲಕ ಜನರನ್ನು ರಂಜಿಸುತ್ತಿದ್ದ.

ಹಾವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿದ್ದಾನೆ. ಸುತ್ತ ನೆರೆದಿದ್ದ ಜನರು ಅದನ್ನು ನೋಡಿ ಅಚ್ಚರಿಪಟ್ಟಿದ್ದರು. ಆದ್ರೆ ಹಾವು ನಿಧಾನವಾಗಿ ಆತನ ಕತ್ತನ್ನು ಸುತ್ತಿಕೊಂಡಿದೆ. ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಅದರಿಂದ ತಪ್ಪಿಸಿಕೊಳ್ಳಲು ಹಾವಾಡಿಗನಿಂದ ಸಾಧ್ಯವಾಗಿಲ್ಲ.

ಉಸಿರುಗಟ್ಟಿ ಹಾಗೇ ಆತ ನೆಲಕ್ಕುರುಳಿದ್ದ. ಹಾವನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದ. ಇದನ್ನು ನೋಡುತ್ತ ನಿಂತಿದ್ದ ಸಾರ್ವಜನಿಕರಲ್ಲಿ ಒಬ್ಬ ವ್ಯಕ್ತಿ ಕೂಡಲೇ ಮುಂದೆ ಬಂದು ಹಾವಿನ ಮೇಲೆ ನೀರು ಸುರಿದಿದ್ದಾನೆ. ಆಗ ಹೆಬ್ಬಾವು ಹಿಡಿತ ಸಡಿಲ ಮಾಡಿದೆ, ಹಾವಾಡಿಗ ಪಾರಾಗಿದ್ದಾನೆ. ಅಸ್ವಸ್ಥನಾಗಿ ಬಿದ್ದಿದ್ದ ಆತನನ್ನು ಕೂಡಲೇ ವಾರಣಾಸಿಯ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...