alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲಿ ಪ್ರತ್ಯಕ್ಷವಾಯ್ತು ದೈತ್ಯ ಹೆಬ್ಬಾವು

snake

ಉತ್ತರ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗಿದೆ. ಮಳೆಯ ಅಬ್ಬರದಿಂದಾಗಿ ಮಿರ್ಜಾಪುರದ ಲಖನಿಯಾ ದರಿ ಜಲಪಾತದ ಬಳಿ ಹಾವುಗಳ ಹಾವಳ ಜಾಸ್ತಿಯಾಗಿದೆ. ಹಾವುಗಳು ರಸ್ತೆಗಳಿಗೂ ಬಂದುಬಿಟ್ಟಿವೆ. ದೈತ್ಯ ಹೆಬ್ಬಾವೊಂದು ನಡುರಸ್ತೆಯಲ್ಲೇ ಬಂದು ಮಲಗಿಬಿಟ್ಟಿತ್ತು.

 

ರಸ್ತೆಯಲ್ಲಿ ಮಲಗಿದ್ದ ಹಾವನ್ನು ನೋಡಿ ಗಾಬರಿಗೊಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು. ಕೆಲವರು ಕುತೂಹಲದಿಂದ ಹೆಬ್ಬಾವು ನೋಡಲು ಆಗಮಿಸಿದ್ರು. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಆಗಮಿಸಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.

ವಾರಣಾಸಿಯಲ್ಲಿ ಈ ಬಾರಿ ದಾಖಲೆಯ 100 ಮಿಲಿ ಮೀಟರ್ ಮಳೆಯಾಗಿದೆ. ಲಖ್ನೋ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕೂಡ ವರುಣ ಅಬ್ಬರಿಸಲಿದ್ದಾನೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀರತ್, ರಾಯ್ ಬರೇಲಿ, ಗಾಜಿಪುರ್, ನಿಜಾಮಾಬಾದ್, ಅಲಿಘಡ, ಸುಲ್ತಾನ್ಪುರ ಮತ್ತು ಮುಜಫರ್ ನಗರದಲ್ಲಿ ಕೂಡ ವರ್ಷಧಾರೆ ಜೋರಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...