alex Certify
ಕನ್ನಡ ದುನಿಯಾ       Mobile App
       

Kannada Duniya

ರೀ ಓಪನ್ ಆಯ್ತು ಪುಟ್ಟಂಗಳ್ ದೇವಾಲಯ

kerala-temple a17

ಕೊಲ್ಲಂ: ಕಳೆದ ಭಾನುವಾರ ದೇವಾಲಯದಲ್ಲಿ ನಡೆದ, ಉತ್ಸವದ ಸಂದರ್ಭದಲ್ಲಿ ಸಿಡಿಮದ್ದು ಸ್ಪೋಟದಿಂದ, ಸಂಭವಿಸಿದ ಭೀಕರ ದುರಂತದ ಬಳಿಕ, ಬಾಗಿಲು ಮುಚ್ಚಿದ್ದ, ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಂಗಳ್ ದೇವಾಲಯದ ಬಾಗಿಲು ತೆರೆಯಲಾಗಿದೆ.

ಕಳೆದ ಭಾನುವಾರ ನಡೆದ ಪಟಾಕಿ ದುರಂತದಲ್ಲಿ ಬರೋಬ್ಬರಿ 108 ಮಂದಿ ಮೃತಪಟ್ಟು, ಸುಮಾರು 400ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ನಡೆದ ತರುವಾಯ ದೇವಾಲಯದ ಬಾಗಿಲು ಹಾಕಲಾಗಿತ್ತು. ಇಂದು ಬೆಳಗಿನಜಾವ 4 ಗಂಟೆಗೆ ದೇವಾಲಯದ ಪ್ರಧಾನ ಅರ್ಚಕ ಉನ್ನಿಕೃಷ್ಣನ್ ದೇವಾಲಯದ ಬಾಗಿಲನ್ನು ತೆರೆದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಭಾಗದ ಜನರೆಲ್ಲಾ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.

ದುರಂತ ಸಂಭವಿಸಿದ ಬಳಿಕ 7ನೇ ದಿನಕ್ಕೆ ದೇವಾಲಯದ ಬಾಗಿಲನ್ನು ತೆರೆಯುವ ಕುರಿತಂತೆ ತೀವ್ರ ಚರ್ಚೆ ನಡೆಸಲಾಗಿತ್ತು. ದೇವಳದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಾಗಿಲು ತೆರೆಯಲಾಗಿದೆ. ಕೆಲವರು ಶುದ್ಧೀಕರಣ ಬಳಿಕ ಬಾಗಿಲು ತೆರೆಯಬೇಕೆಂದು ಹೇಳಿದರೆ, ಮತ್ತೆ ಕೆಲವರು, 7ನೇ ದಿನಕ್ಕೆ ಪೂಜೆ ಆರಂಭಿಸಬೇಕೆಂದು ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...