alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ವ್ಯಾಲಂಟೈನ್ ಡೇ ಜಾಹೀರಾತು

ವ್ಯಾಲಂಟೈನ್ ಡೇ ಹತ್ತಿರ ಬರ್ತಿದೆ. ಜೋಡಿ ಹಕ್ಕಿಗಳು ಈಗಾಗ್ಲೇ ಪ್ರೇಮಿಗಳ ದಿನ ಆಚರಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಮೋಷನ್ ಮತ್ತು ಮಾರ್ಕೆಟಿಂಗ್ ನಡೆಸುತ್ತಿವೆ. ಚಾಕಲೇಟ್ ಮತ್ತು ಹೂವಿನ ಬೊಕೆಗಳಿಗೆ ಈಗ ಬಹುಬೇಡಿಕೆ.

ಪಂಜಾಬ್ ಯುವಕನೊಬ್ಬ ಗ್ರಾಹಕರನ್ನು ಸೆಳೆಯಲು ಮಾಡಿರುವ ಕಸರತ್ತು ಮಾತ್ರ ಇಂಟರ್ನೆಟ್ ನಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಚಪ್ಪಲಿ ಅಂಗಡಿ ಇಟ್ಕೊಂಡಿರೋ ಈ ಯುವಕ ಸಖತ್ ಇಂಟ್ರೆಸ್ಟಿಂಗ್ ಆಗಿ ಮಾರ್ಕೆಟಿಂಗ್ ಮಾಡ್ತಿದ್ದಾನೆ.

ವ್ಯಾಲಂಟೈನ್ ಡೇ ದಿನ ಯುವಕರು ತಮಗಿಷ್ಟವಾದ ಯುವತಿಯರಿಗೆ ಪ್ರಪೋಸ್ ಮಾಡ್ತಾರೆ. ಅದನ್ನು ಒಪ್ಪೋದು ಬಿಡೋದು ನಿಮಗೆ ಬಿಟ್ಟ ವಿಚಾರ, ಆದ್ರೆ ಯಾರಾದ್ರೂ ನಿಮ್ಮ ಜೊತೆ ಅನುಚಿತವಾಗಿ ನಡೆದುಕೊಂಡ್ರೆ, ನಿಮ್ಮನ್ನು ಹಿಂಬಾಲಿಸಿದ್ರೆ ಅಂಥವರಿಗೆ ಬೂಟಿನೇಟು ಕೊಡಿ.

ಅದಕ್ಕಾಗಿ ನಿಮ್ಮ ಬಳಿ ಬೂಟು ಇರಬೇಕು. ಬೂಟು ಖರೀದಿ ಮಾಡಲು ನಮ್ಮ ಅಂಗಡಿಗೆ ಬನ್ನಿ ಅಂತಾ ವಿಡಿಯೋದಲ್ಲಿ ಹೇಳಿದ್ದಾನೆ. ಪಂಜಾಬ್ ನ ಸಿರ್ಹಂದ್ ಎಂಬಲ್ಲಿ ಇವನ ಚಪ್ಪಲಿ ಅಂಗಡಿ ಇದೆಯಂತೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...