alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ಕೃತ್ಯ

613154-faridkot

ಪಂಜಾಬ್ ನ ಫರೀದ್ ಕೋಟ್ ನಲ್ಲಿ ಹಾಡಹಗಲೇ ಭಯಾನಕ ಕೃತ್ಯ ನಡೆದಿದೆ. ಅಕ್ಕಿ ವ್ಯಾಪಾರಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಹತ್ಯೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಧ್ಯಾಹ್ನ 3 ಗಂಟೆ ವೇಳೆಗೆ ಜೈತೋ ಭಜಖಾನಾ ಬಳಿ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಅಕ್ಕಿ ಮಿಲ್ ನ ಎದುರಿನಲ್ಲೇ ಪಪ್ಪು ಕೊಚ್ಚರ್ ಎಂಬಾತನನ್ನು ಕೊಂದು ಹಾಕಲಾಗಿದೆ.

ಮಿಲ್ ಮಾಲೀಕ ಪಪ್ಪು, ಮಧ್ಯಾಹ್ನ ಊಟಕ್ಕೆ ಅಂತಾ ತೆರಳಿದ್ದ. ಊಟ ಮುಗಿಸಿಕೊಂಡು ಮರಳಿ ಮಿಲ್ ಬಳಿ ಬರ್ತಿದ್ದಂತೆ ಅಪರಿಚಿತ ದುಷ್ಕರ್ಮಿಗಳು ಪ್ರತ್ಯಕ್ಷವಾಗಿದ್ರು.

ಪಪ್ಪು ಕಾರು ತಂದು ಮಿಲ್ ಬಳಿ ನಿಲ್ಲಿಸಿದ್ದ, ಕೆಳಕ್ಕೆ ಕೂಡ ಇಳಿದಿರಲಿಲ್ಲ. ಅವನ ಹಿಂದೆಯೇ ಬಿಳಿ ಬಣ್ಣದ ಕಾರಿನಲ್ಲಿ ದುಷ್ಕರ್ಮಿಗಳು ಕೂಡ ಆಗಮಿಸಿದ್ರು. ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ಪಿಸ್ತೂಲ್ ನಿಂದ ನಾಲ್ಕೈದು ಬಾರಿ ಪಪ್ಪು ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಮತ್ತೆ ಕಾರು ಹತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...