alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಕವರ್ ನಲ್ಲಿ ಮಗುವನ್ನಿಟ್ಟುಕೊಂಡು ಮಾರಲು ಬಂದಿದ್ದ ತಂದೆ…!

ವ್ಯಕ್ತಿಯೊಬ್ಬ ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿಕೊಂಡು ಮಾರಲು ಯತ್ನಿಸಿದ ಆಘಾತಕಾರಿ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ. ಆರೋಪಿ ಜಸ್ಪಾಲ್ ಸಿಂಗ್ ಮೊಹಾಲಿ ಸಿವಿಲ್ ಆಸ್ಪತ್ರೆಯ ವೈದ್ಯರನ್ನ ಭೇಟಿಯಾದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಅಮೃತ್ ಸರದವನಾದ ಈ ವ್ಯಕ್ತಿ, ಚಂಢೀಗಡದಲ್ಲಿ ತನ್ನ ಕುಟುಂಬಸ್ಥರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈತ ತನಗೆ ಹುಟ್ಟಿದ ಹೆಣ್ಣು ಮಗುವನ್ನು ಮಾರಲು ಯತ್ನಿಸುತ್ತಿದ್ದು, ಆಸ್ಪತ್ರೆಯಲ್ಲಿ ಯಾರಾದ್ರೂ ಕೊಂಡುಕೊಳ್ಳುವವರು ಸಿಗಬಹುದೆಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಬಂದಿದ್ದ.

ಆಗ ಡ್ಯೂಟಿ ವೈದ್ಯರಿಗೆ ಸಿಕ್ಕಿಬಿದ್ದಿದ್ದಾನೆ. ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮಗು ಅನಾರೋಗ್ಯಕ್ಕೊಳಗಾಗಿ ವಾಂತಿ ಮಾಡಿಕೊಂಡಿತ್ತು. ತಕ್ಷಣವೇ ಆ ಮಗುವನ್ನು ವೈದ್ಯರು ತಪಾಸಣೆ ನಡೆಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. ಸಧ್ಯ ಈಗ ಆ ಮಗು ಆರೋಗ್ಯವಾಗಿದೆ. ಇತ್ತ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿ ಜಸ್ಪಾಲ್ ಸಿಂಗ್ ನನ್ನು ವಿಚಾರಣೆ ನಡೆಸಿದಾಗ ಆತ ತನಗೆ ಈಗಾಗಲೆ ಎರಡು ಗಂಡು ಮಕ್ಕಳಿವೆ. ಮೂರನೆಯ ಮಗು ಹೆಣ್ಣಾಗಿದ್ದರಿಂದ ಈ ಮಗುವನ್ನು ಮಾರಲು ಮುಂದಾದೆ ಎಂದು ಹೇಳಿದ್ದಾನೆ. ಮಗುವನ್ನು ಮಾರಿ ಬಂದ ಹಣದಿಂದ ಅನಾರೋಗ್ಯಕ್ಕೊಳಗಾಗಿರುವ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಲು ಈ ರೀತಿ ಮಾಡಿದೆ ಅಂತಾ ವಿಚಾರಣೆ ವೇಳೆ ತಿಳಿಸಿದ್ದಾನೆ. ಇನ್ನು ಈ ಮಗುವನ್ನು ಮಾರಲು ನನ್ನ ಪತ್ನಿಯೇ ನನಗೆ ಸೂಚಿಸಿದ್ದಳು ಅಂತಾ ಹೇಳಿದ್ದಾನೆ.

ಶಿಶುವನ್ನು ಮಾರಲು ಈ ಆಸ್ಪತ್ರೆಗೆ ಬರುವುದಕ್ಕಿಂತ ಮೊದಲು, ಈತ ಹಲವು ಆಸ್ಪತ್ರೆಗಳನ್ನು ಸುತ್ತಿ ಬಂದಿದ್ದ. ಆದ್ರೆ ಅವನ ನಿರೀಕ್ಷೆಗೆ ತಕ್ಕಂತೆ ಕೊಳ್ಳುವವರು ಸಿಗದ ಹಿನ್ನೆಲೆಯಲ್ಲಿ ಆತ ಇಲ್ಲಿಗೆ ಬಂದು ಮಗುವನ್ನು ಮಾರಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಸಧ್ಯ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಈತನ ಮೇಲೆ ಕೇಸ್ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...