alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಿಕೊಂಡ ತಪ್ಪಿಗೆ ಕ್ಷಮೆ ಕೇಳಬೇಕಾಗಿದೆ ಸಿಧು

ಚಂಡೀಘಡ: ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಿಕ್ಸರ್ ಸಿಧು ಎಂಬ ಖ್ಯಾತಿ ಗಳಿಸಿದ್ದ, ಹಾಲಿ ಪಂಜಾಬ್ ಸರ್ಕಾರದ ಮಂತ್ರಿ ನವಜೋತ್ ಸಿಂಗ್ ಸಿಧು ಈಗ ತಮ್ಮ ನಡವಳಿಕೆಯಿಂದ ಸರ್ವತ್ರ ಟೀಕೆಗೆ ಒಳಗಾಗಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಧು, ಅಲ್ಲಿ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದರು. ಈ ಘಟನೆ ಬಗ್ಗೆ ಪಂಜಾಬ್ ಸಂಪುಟ ಸದಸ್ಯರಿಂದಲೇ ಟೀಕೆ ವ್ಯಕ್ತವಾಗಿದೆ. ಅವರ ಸಂಪುಟ ಸಹೋದ್ಯೋಗಿಗಳೇ ಸಿದ್ದು ವರ್ತನೆಗೆ ಅಸಹನೆ ವ್ಯಕ್ತಪಡಿಸಿದ್ದು, ಕೂಡಲೇ ಭಾರತೀಯ ಸೈನಿಕರ ಕುಟುಂಬಗಳ ಕ್ಷಮೆ ಕೇಳಿ ಎಂದು ಬಹಿರಂಗ ಸಲಹೆ ನೀಡಿದ್ದಾರೆ.

ಸಿಧು ಸಾಹೇಬ್ ನನ್ನ ಸಂಪುಟದ ಹಿರಿಯ ಸಹೋದ್ಯೋಗಿ. ಅವರಿಗೆ ನಾನು ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದರೆ, ಅವರು ಸೈನಿಕರ ಕುಟುಂಬದ ಕ್ಷಮೆ ಯಾಚಿಸಬೇಕೆಂದು ಮಾತ್ರ ಸಲಹೆ ನೀಡುತ್ತೇನೆ ಎಂದು ಪಂಜಾಬ್ ಸರ್ಕಾರದ ಮಂತ್ರಿ ತ್ರಿಪಾತ್ ರಾಜೇಂದ್ರಸಿಂಗ್ ಬಾಜ್ವಾ ಹೇಳಿಕೆ ನೀಡಿದ್ದಾರೆ. ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನನ್ನು ಆಹ್ವಾನಿದ್ದು, ಸಿಧು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಪರಾಧವೇನಲ್ಲ ಎಂದೂ ಸಹ ಅವರು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಸಿಎಂ ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸೈನಿಕರು ಪ್ರತಿನಿತ್ಯ ಪ್ರಾಣತ್ಯಾಗ ಮಾಡುತ್ತಿದ್ದಾರೆ. ನಮ್ಮದೇ ರೆಜಿಮೆಂಟ್ ನ ಮೇಜರ್ ಮತ್ತು ಇಬ್ಬರು ಸೈನಿಕರು ಕೆಲವೇ ತಿಂಗಳಲ್ಲಿ ಜೀವ ತೆತ್ತಿದ್ದಾರೆ. ಹೀಗಿರುವಾಗ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದು ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್ ಮಾತ್ರ ಸಿಧು ಪರವಾಗಿ ಬ್ಯಾಟಿಂಗ್ ಮಾಡಿದ್ದು, ಇದು ವಿವಾದಿತ ಸೃಷ್ಟಿ ಎಂದು ಬಣ್ಣಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...