alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಸಾವಿಗೆ ಕೆನಡಾ ಪ್ರಧಾನಿ ಬಳಿ ನ್ಯಾಯ ಕೇಳ್ತಿದ್ದಾನೆ ಪಂಜಾಬ್ ವ್ಯಕ್ತಿ

ಪಂಜಾಬ್ ನ ಸುಖ್ವಿಂದರ್ ಸಿಂಗ್ ಮಿಥು ಎಂಬಾತನ ಪತ್ನಿ, ಕೆನಡಾ ಮೂಲದ ಜಸ್ವಿಂದರ್ ಕೌರ್ ಜಸ್ಸಿಯನ್ನು 18 ವರ್ಷಗಳ ಹಿಂದೆ ಹತ್ಯೆ ಮಾಡಲಾಗಿತ್ತು. ಜಸ್ಸಿಯ ತಾಯಿ ಹಾಗೂ ಮಲತಂದೆ ಈ ಕೃತ್ಯ ಎಸಗಿದ್ದಾರಂತೆ. ಹಾಗಾಗಿ ಅವರಿಬ್ಬರನ್ನೂ ಭಾರತಕ್ಕೆ ಗಡಿಪಾರು ಮಾಡಬೇಕು ಅನ್ನೋದು ಸುಖ್ವಿಂದರ್ ಮನವಿ.

ಪತ್ನಿಯನ್ನು ಕಳೆದುಕೊಂಡಿರೋ ಸುಖ್ವಿಂದರ್ ಈ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ಕೊಲೆ ಪ್ರಕರಣದ ಇತರ 8 ಆರೋಪಿಗಳಿಗೆ ಈಗಾಗ್ಲೇ ಜೀವಾವಧಿ ಶಿಕ್ಷೆಯಾಗಿದೆ. ಆದ್ರೆ ಮಲ್ಕೈತ್ ಕೌರ್ ಹಾಗೂ ಸುರ್ಜಿತ್ ಸಿಂಗ್ ಬದೇಶಾ ವಿರುದ್ಧ ತನಿಖೆಯೇ ಪೂರ್ಣಗೊಂಡಿಲ್ಲ.

ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಲು ನಡೆಸಿದ ಪ್ರಯತ್ನವೆಲ್ಲ ವಿಫಲವಾಗಿದೆ. ಭಾರತ ಭೇಟಿಯಲ್ಲಿರೋ ಕೆನಡಾ ಪ್ರಧಾನಿ ತಮಗೆ ನ್ಯಾಯ ಕೊಡಿಸ್ತಾರೆ ಅನ್ನೋ ವಿಶ್ವಾಸದಲ್ಲಿದ್ದಾರೆ ಸುಖ್ವಿಂದರ್. ಸುಖ್ವಿಂದರ್ ಬಡ ಕುಟುಂಬದ ಯುವಕನಾಗಿದ್ದ, ಕೋಟ್ಯಾಧೀಶನ ಮಗಳು ಜಸ್ಸಿಯನ್ನು ಪ್ರೀತಿಸಿದ್ದ.

ಇಬ್ಬರೂ ಗುಟ್ಟಾಗಿ ಭಾರತದಲ್ಲಿ ಮದುವೆಯಾಗಿದ್ದರು. ಆದ್ರೆ ನಂತರ ಸುಖ್ವಿಂದರ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. 1999ರಲ್ಲಿ ಸುಪಾರಿ ಹಂತಕರು ಜಸ್ಸಿ ಹಾಗೂ ಸುಖ್ವಿಂದರ್ ಮೇಲೆ ದಾಳಿ ಮಾಡಿದ್ದರು. ಜಸ್ಸಿಯನ್ನು ಹತ್ಯೆ ಮಾಡಲಾಗಿತ್ತು. 2005ರಲ್ಲಿ ಆರೋಪಿಗಳನ್ನು ಗಡಿಪಾರು ಮಾಡುವಂತೆ ಪಂಜಾಬ್ ಪೊಲೀಸರು ಕೂಡ ಕೆನಡಾಕ್ಕೆ ಮನವಿ ಮಾಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...