alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಲಕ್ಷ್ಮಿಯಾದ ಮಗಳು, ಬದಲಾಯ್ತು ಮನೆಯ ಅದೃಷ್ಟ

ಪಂಜಾಬಿನ ಬಥಿಂಡಾ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಮನೆ ಮಗಳೇ ಲಕ್ಷ್ಮಿಯಾಗಿ ಹಣದ ಹೊಳೆ ಹರಿಸಿದ್ದಾಳೆ. ಪಂಜಾಬ್ ಸರ್ಕಾರದ ಲಾಟರಿ ಗುಲಾಬಗಂಟ್ ಗ್ರಾಮದ ಹುಡುಗಿಗೆ ಬಂದಿದೆ. ಗ್ರಾಮದ ಪರಮ್ ಜಿತ್ ಸಿಂಗ್ ಮಗಳು ಲಕ್ವಿಂದರ್ ಗೆ ಲಾಟರಿ ತಟ್ಟಿದೆ.

ಪರಮ್ಜಿತ್ ಸಿಂಗ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾರೆ. ಅವ್ರ ಅಲ್ಪ ಸಂಬಳದಲ್ಲಿಯೇ ಮನೆ ನಡೆಯುತ್ತಿತ್ತು. ಅತ್ಯಂತ ಬಡ ಕುಟುಂಬದ ಮಗಳು ಲಕ್ವಿಂದರ್ ಅದೇ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದಾಳೆ. ತಾಯಿ ಜೊತೆ ಬಸ್ ನಿಲ್ದಾಣಕ್ಕೆ ಬಂದಿದ್ದ ಲಕ್ವಿಂದರ್ ಲಾಟರಿ ಖರೀದಿ ಮಾಡಿದ್ದಳು.

ಬುಧವಾರ ಲಕ್ವಿಂದರ್ ಗೆ ಲಾಟರಿ ಮಾರಾಟಗಾರರಿಂದ ಕರೆ ಬಂದಿದೆ. ನಿಮಗೆ ಒಂದೂವರೆ ಕೋಟಿ ಲಾಟರಿ ಹೊಡೆದಿದೆ ಎಂದು ತಿಳಿಸಿದ್ದಾರೆ. ಇದನ್ನು ಕೇಳ್ತಿದ್ದಂತೆ ಲಕ್ವಿಂದರ್ ಕಂಗಾಲಾಗಿದ್ದಾಳೆ. ಒಂದು ದಿನ ಇದನ್ನು ನಂಬೋದೇ ಕಷ್ಟವಾಗಿತ್ತು. ಲಾಟರಿ ಸಿಕ್ಕ ಸುದ್ದಿ ಕೇಳ್ತಿದ್ದಂತೆ ಇಡೀ ಕುಟುಂಬ ಸಂತೋಷದಲ್ಲಿ ಮಿಂದೇಳುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...