alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬ್-ಗೋವಾ ಬಹಿರಂಗ ಪ್ರಚಾರಕ್ಕೆ ತೆರೆ

election-campaign

ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 4ರಂದು ಎರಡೂ ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ 5 ಗಂಟೆಗೆ ತೆರೆ ಬಿದ್ದಿದೆ. ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 11ರಂದು ಹೊರಬೀಳಲಿದೆ.

ಪಂಜಾಬ್ ನ 117 ಹಾಗೂ ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 3 ಮತ್ತು ನಾಲ್ಕರಂದು ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಜಾಹೀರಾತು ಪ್ರಕಟಿಸಬಾರದೆಂದು ಚುನಾವಣಾ ಆಯೋಗ ಕಟ್ಟನಿಟ್ಟಿನ ಆದೇಶ ಮಾಡಿದೆ.

ಗೋವಾದ 40 ವಿಧಾನಸಭಾ ಸ್ಥಾನಗಳ ಪೈಕಿ 20 ಸೀಟು ಬಿಜೆಪಿ ಬಳಿ ಇದೆ. 9 ಸ್ಥಾನ ಕಾಂಗ್ರೆಸ್ ಕೈನಲ್ಲಿದ್ದರೆ ಉಳಿದ 10 ಸೀಟುಗಳು ಪ್ರಾದೇಶಿಕ ಪಕ್ಷಗಳ ಕೈನಲ್ಲಿದೆ. ಮಾರ್ಚ್ 19, 2012ರಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಮಾರ್ಚ್ 18, 2017ರಂದು ಅವರ ಅಧಿಕಾರಾವಧಿ ಮುಗಿಯಲಿದೆ. ಈ ಬಾರಿ ಬಿಜೆಪಿಗೆ ಬಹುಮತ ಬರುವುದು ಅನುಮಾನವಿದ್ದು, ಉಳಿದ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಬಿಜೆಪಿ.

ಇನ್ನು ಪಂಜಾಬ್ ನಲ್ಲಿ ಬಿಜೆಪಿ-ಅಕಾಲಿ ದಳದ ಮೈತ್ರಿ ಸರ್ಕಾರವಿದೆ. 117 ವಿಧಾನ ಸಭಾ ಸ್ಥಾನಗಳ ಪೈಕಿ ಅಕಾಲಿ ದಳದ ಬಳಿ 56, ಬಿಜೆಪಿ ಬಳಿ 12 ಸೀಟ್ ಇದೆ. ಕಾಂಗ್ರೆಸ್ ಬಳಿ 46 ಸೀಟ್ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...