alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಹಣೆ ಮೇಲೆ ಹಚ್ಚೆ ಹಾಕಿಸಿದ್ದ ಪೊಲೀಸರಿಗೆ ಜೈಲು

punjab-cops-who-tattooed-jeb-katri-on-foreheads-of-4-women-get-jailಪರ್ಸ್ ಕಳ್ಳತನ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿದ್ದ ಪೊಲೀಸರು ಅವರ ಹಣೆಯ ಮೇಲೆ ‘ಜೇಬ್ ಖತ್ರಿ’ ಎಂದು ಹಚ್ಚೆ ಹಾಕಿಸಿದ್ದ ಪ್ರಕರಣದ ತೀರ್ಪು ಈಗ ಹೊರ ಬಿದ್ದಿದ್ದು, ಪಂಜಾಬ್ ನ ಅಮೃತಸರದ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಸೇರಿದಂತೆ ಮೂರು ಮಂದಿ ಪೊಲೀಸರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

1993 ರ ಡಿಸೆಂಬರ್ ನಲ್ಲಿ ಈ ಪ್ರಕರಣ ನಡೆದಿದ್ದು, 23 ವರ್ಷಗಳ ಬಳಿಕ ತೀರ್ಪು ಹೊರ ಬಿದ್ದಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಲ್ಜಿಂದರ್ ಸಿಂಗ್ ಶುಕ್ರವಾರದಂದು ತೀರ್ಪು ನೀಡಿದ್ದು, ಅಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಸುಖ್ದೇವ್ ಸಿಂಗ್, ಸಬ್ ಇನ್ಸ್ ಪೆಕ್ಟರ್ ನರೇಂದರ್ ಸಿಂಗ್ ಮಲ್ಲಿ ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕನ್ವಲ್ ಜಿತ್ ಸಿಂಗ್ ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ.

1993 ರ ಡಿಸೆಂಬರ್ ನಲ್ಲಿ ಪರ್ಸ್ ಕಳವು ಮಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿದ್ದ ಪೊಲೀಸರು, ಅವರ ಹಣೆಯ ಮೇಲೆ ‘ಜೇಬ್ ಖತ್ರಿ’ ಎಂದು ಹಚ್ಚೆ ಹಾಕಿಸಿ ಅವಮಾನಿಸಿದ್ದರು. ನ್ಯಾಯಾಲಯದ ಮುಂದೆ ಇವರನ್ನು ಹಾಜರುಪಡಿಸಿದ್ದ ವೇಳೆ ದುಪ್ಪಟ್ಟಾದಿಂದ ಹಚ್ಚೆಯನ್ನು ಮರೆ ಮಾಡಿಕೊಳ್ಳುವಂತೆ ಬೆದರಿಸಿದ್ದರು. ಆದರೆ ಈ ಪೈಕಿ ಓರ್ವ ಮಹಿಳೆ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ತೆರೆದಿಟ್ಟಿದ್ದರು.

ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿತ್ತಲ್ಲದೇ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಬಿಐ ತನಿಖೆ ನಡೆಸಲು ಆದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದ್ದು, ತನಿಖೆ ನಡೆಸಿದ ಸಿಬಿಐ ತಂಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.

ಈ ಮಧ್ಯೆ ಹಣೆ ಮೇಲೆ ಅವಮಾನಕರ ರೀತಿಯ ಹಚ್ಚೆ ಹೊಂದಿದ್ದ ಮಹಿಳೆಯರಿಗೆ ಪಂಜಾಬ್ ಸರ್ಕಾರದ ವೆಚ್ಚದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸುವಂತೆ ಸೂಚಿಸಲಾಗಿತ್ತಲ್ಲದೇ ಅವರುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿತ್ತು. ಇದೀಗ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಮೂರು ಮಂದಿ ಪೊಲೀಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...