alex Certify
ಕನ್ನಡ ದುನಿಯಾ       Mobile App
       

Kannada Duniya

ಪಾದ ಮುಟ್ಟಿ ಕೆಲಸ ಕಳೆದುಕೊಂಡ ಪೊಲೀಸಪ್ಪ…!

ದುರ್ನಡತೆಯ ಆರೋಪದ ಮೇಲೆ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಸಚಿವರು ಕೆಂಡಾಮಂಡಲರಾಗಿದ್ದಾರೆ. ಕೇವಲ ಇಷ್ಟೇ ಅಗಿದ್ದರೆ ವಿಷಯ ದೊಡ್ಡದಾಗ್ತಿರಲಿಲ್ಲ. ಸಚಿವರ ಕೋಪಕ್ಕೆ ಆತ ಕೆಲಸದಿಂದಲೇ ವಜಾಗೊಂಡಿದ್ದಾನೆ. ಹಿರಿಯ ಅಧಿಕಾರಿಗಳು ಫೋನ್ನಲ್ಲೇ ಆತನಿಗೆ ಕೆಲಸದಿಂದ ವಜಾಗೊಳಿಸಿರುವ ಸಂದೇಶ ನೀಡಿದ್ದಾರೆ.

ಬಾಟ್ಲಾ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಲ್ವೀಂದರ್ ಸಿಂಗ್ ಎಂಬ ವ್ಯಕ್ತಿಯೇ ಕೆಲಸದಿಂದ ವಜಾಗೊಂಡಿರುವ ಪೊಲೀಸ್ ಅಧಿಕಾರಿ. ಕರ್ತವ್ಯದಲ್ಲಿರುವ ಸಂದರ್ಭದಲ್ಲೇ ಪಂಜಾಬ್ ನ ಸಚಿವರೊಬ್ಬರ ಮನೆಗೆ ಬಂದ ಪಲ್ವೀಂದರ್ ಅವರ ಪಾದವನ್ನು ಕೈಯಿಂದ ಸ್ಪರ್ಶಿಸಿ ನಮಸ್ಕರಿಸಿದ. ಕೂಡಲೇ ಕೋಪಗೊಂಡ ಸಚಿವರು ಪೊಲೀಸ್ ಹಿರಿಯ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಪಲ್ವೀಂದರ್ ಅವರನ್ನ ಕೆಲಸದಿಂದ ವಜಾ ಮಾಡುವಂತೆ ಅದೇಶ ನೀಡಿದ್ರು.

ಆನಂತರದಲ್ಲಿ ಪಲ್ವೀಂದರ್ ಅವರ ಮೊಬೈಲ್ ಗೆ ಈ ಕೂಡಲೇ ನಿಮ್ಮನ್ನ ಕೆಲಸದಿಂದ ವಜಾ ಮಾಡಲಾಗಿದೆ ಅನ್ನೋ ಸಂದೇಶ ರವಾನೆಯಾಗಿದೆ. ಅಷ್ಟೇ ಅಲ್ಲ ಪೊಲೀಸ್ ಸ್ಟೇಷನ್ ಮತ್ತು ಆತನ ಮನೆಯ ಬಾಗಿಲಲ್ಲೂ ವಜಾದ ಪ್ರತಿಯನ್ನ ಹಾಕಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಗಳು ಇಂತಾ ಘಟನೆಗಳು ಜನರಲ್ಲಿ ಪೊಲೀಸ್ ಇಲಾಖೆ ಮೇಲಿನ ಗೌರವ ಕಡಿಮೆಯಾಗುವಂತೆ ಮಾಡುತ್ತವೆ. ಹಾಗಾಗಿಯೇ ಪಲ್ವೀಂದರ್ ಕೆಲಸ ಕಳೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...