alex Certify
ಕನ್ನಡ ದುನಿಯಾ       Mobile App
       

Kannada Duniya

ಇವರು ಪುಣೆಯ ಶ್ರೀಮಂತ ಭಿಕ್ಷುಕರು…!

ಭಿಕ್ಷಾಟನೆಯ ನಿಯಂತ್ರಣಕ್ಕೆ ಸರ್ಕಾರಗಳು ಹತ್ತಾರು ಕ್ರಮಗಳನ್ನು ಕೈಗೊಂಡರೂ ಭಿಕ್ಷಾಟನೆಯೇನೂ ಕಮ್ಮಿಯಾಗಿಲ್ಲ. ಭಿಕ್ಷಾಟನೆಯನ್ನೇ ಉದ್ಯಮವಾಗಿರಿಸಿಕೊಂಡಿರುವ ಕೆಲ ಖದೀಮರು ಇದಕ್ಕಾಗಿ ಅಪ್ರಾಪ್ತರನ್ನು ಅಪಹರಿಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಭಿಕ್ಷಾಟನೆ ನಿರ್ಮೂಲನೆಗೆಂದು ಕಾರ್ಯಾಚರಣೆ ನಡೆಸಿ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಿದರೂ ಕೆಲ ದಿನಗಳಲ್ಲೇ ಹೊರ ಬರುವ ಅವರುಗಳು ಮತ್ತದೆ ವೃತ್ತಿಗೆ ಮರಳುತ್ತಿರುವುದು ಕಂಡು ಬಂದಿದೆ. ಭಿಕ್ಷಾಟನೆ ನಡೆಸುತ್ತಿದ್ದವರನ್ನು ಬಂಧಿಸಿದ್ದ ಪುಣೆ ಪೊಲೀಸರು ನಂತರ ನಡೆದ ಬೆಳವಣಿಗೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಪುಣೆಯ ಖಾಂಡ್ವಾ ಪೊಲೀಸರು ಕಾರ್ಯಾಚರಣೆ ನಡೆಸಿ 27 ಮಂದಿ ಭಿಕ್ಷುಕರನ್ನು ಬಂಧಿಸಿದ್ದರು. ಆದರೆ ಅಚ್ಚರಿಯೆಂಬಂತೆ ಅಷ್ಟೂ ಮಂದಿ ತಲಾ 5 ಸಾವಿರ ರೂ. ದಂಡವನ್ನು ಕ್ಯಾಶ್ ನಲ್ಲಿ ಕಟ್ಟಿ ಬಂಧಿತರಾದ ಒಂದು ಗಂಟೆಯಲ್ಲೇ ಬಿಡುಗಡೆಗೊಂಡಿದ್ದಾರೆ. ಭಿಕ್ಷಾಟನೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ವ್ಯಕ್ತಿ ಇವರುಗಳ ದಂಡದ ಮೊತ್ತವನ್ನು ಭರಿಸಿರಬಹುದೆಂಬ ಶಂಕೆ ಹೊಂದಿರುವ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...