alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಅಂಗಿ ಧರಿಸುತ್ತಿದ್ದ ವ್ಯಕ್ತಿಯ ಭೀಕರ ಹತ್ಯೆ

pune-gold-man_6ಮೈ ತುಂಬಾ ಕೆ.ಜಿ. ಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ಹಾಗೂ 2012 ರಲ್ಲಿ ನಡೆದ ತಮ್ಮ ಹುಟ್ಟು ಹಬ್ಬಕ್ಕೆ 1 ಕೋಟಿ ರೂ. ಗೂ ಅಧಿಕ ಬೆಲೆಯ ಚಿನ್ನದ ಅಂಗಿಯನ್ನು ಸ್ವತಃ ತಾವೇ ಗಿಫ್ಟ್ ಮಾಡಿಕೊಂಡಿದ್ದ ಪುಣೆಯ ‘ಗೋಲ್ಡ್ ಮ್ಯಾನ್’ 44 ವರ್ಷದ ದತ್ತಾತ್ರಿ ಪುಗೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಪುಣೆಯ ಮಾಜಿ ಕಾರ್ಪೋರೇಟರ್ ಪತಿಯೂ ಆಗಿರುವ ದತ್ತಾತ್ರಿ ಪುಗೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದು, ಕಳೆದ ರಾತ್ರಿ ಅವರ ಮನೆಗೆ ಆಗಮಿಸಿದ ಕೆಲವರು, ಹುಟ್ಟು ಹಬ್ಬ ಆಚರಣೆಗೆ ಆಹ್ವಾನಿಸಿದ್ದರೆಂದು ಹೇಳಲಾಗಿದೆ.

ಅವರುಗಳ ಆಹ್ವಾನದ ಮೇರೆಗೆ ದಿಗಿಯ ಭಾರತ್ ಮಾತಾ ನಗರಕ್ಕೆ ದತ್ತಾತ್ರಿ ಪುಗೆ ತೆರಳಿದ್ದು, ಈ ಸಂದರ್ಭದಲ್ಲಿ ಕಲ್ಲು ಹಾಗೂ ಹರಿತವಾದ ಆಯುಧಗಳಿಂದ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಹತ್ಯೆ ದತ್ತಾತ್ರಿ ಪುಗೆಯ ಪುತ್ರನ ಕಣ್ಣ ಮುಂದೆಯೇ ನಡೆದಿದೆ ಎನ್ನಲಾಗಿದ್ದು, ಆತನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆಗೆ ಹಣಕಾಸು ವ್ಯವಹಾರ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...