alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಟ್ರಿಮೋನಿ ನಂಬಿ ಲಕ್ಷಾಂತರ ಹಣ ಕಳೆದುಕೊಂಡ ಮಹಿಳಾ ಟೆಕ್ಕಿ

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಪುಣೆ ಮೂಲದ ಮಹಿಳಾ ಟೆಕ್ಕಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ನಡೆದಿದೆ. 35ವರ್ಷದ ಮಹಿಳಾ ಟೆಕ್ಕಿಯೊಬ್ಬರು 22.54 ಲಕ್ಷ ರೂಪಾಯಿಯ ವಂಚನೆಯ ಪ್ರಕರಣವನ್ನು ಪುಣೆಯ ಡೆಹು ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿರೋ ಯುವತಿಯೊಬ್ಬರು ಇತ್ತೀಚೆಗೆ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರಲ್ಲಿ ತಮ್ಮ ಹೆಸರು ನೋದಾಯಿಸಿಕೊಂಡಿದ್ದರು. ಆ ವೆಬ್ ಸೈಟ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಲಂಡನ್ನಲ್ಲಿ ವೈದ್ಯನಾಗಿ ಪ್ರಾಕ್ಟಿಸ್ ಮಾಡ್ತಿದ್ದೀನಿ. ನಿಮ್ಮನ್ನ ಮದುವೆ ಆಗ್ತೀನಿ ಅಂತ ಯುವತಿಗೆ ಪ್ರಾಮಿಸ್ ಮಾಡಿದ.

ಅಲ್ಲದೇ ಭಾರತದಲ್ಲಿ ನೆಲಸಿರುವ ತನ್ನ ಸೋದರಿಯರು ಅಂತ ಹೇಳಿ ಆತ ಇಬ್ಬರು ಮಹಿಳೆಯರ ಫೋನ್ ನಂಬರ್ ಕೂಡ ಕೊಟ್ಟಿದ್ದಾನೆ. ಮದುವೆ ಮಾತುಕತೆಗಾಗಿ ಭಾರತಕ್ಕೆ ಬರ್ತಿದ್ದೀನಿ. ವಿಮಾನ ನಿಲ್ದಾಣದಲ್ಲೇ ಮೀಟ್ ಆಗೋಣ ಅಂತ ಹೇಳಿ ಯುವತಿಯನ್ನು ಕರೆಸಿಕೊಂಡಿದ್ದಾನೆ. ವಿಮಾನ ನಿಲ್ದಾಣಕ್ಕೆ ಬಂದ ಯುವತಿಗೆ ಕಸ್ಟಮ್ಸ್ ಅಧಿಕಾರಿ ಅಂತ ಹೇಳಿ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಜೊತೆ ಮದುವೆ ಮಾತುಕತೆಗೆ ಬಂದಿದ್ದ ವ್ಯಕ್ತಿ ದಾಖಲೆ ಇಲ್ಲದೆ 72,000 ಪೌಂಡ್ ಹಣವನ್ನು ತಂದಿದ್ದಾನೆ. ಆತನ ಬಿಡುಗಡೆಗಾಗಿ ನೀವು ದಂಡ ಕಟ್ಟಬೇಕು ಅಂತ ಕೇಳಿದ್ದಾನೆ.

ಆನಂತರದಲ್ಲಿ ಮತ್ತೊಬ್ಬ ವ್ಯಕ್ತಿ ಆರ್ಬಿಐ ಅಧಿಕಾರಿ ಅಂತ ಹೇಳಿ ಯುವತಿಗೆ ಕಾಲ್ ಮಾಡಿ ಅಕೌಂಟ್ ನಂಬರ್ ಕೊಟ್ಟು ಹಣವನ್ನ ಡಿಪಾಸಿಟ್ ಮಾಡುವಂತೆ ಹೇಳಿದ್ದಾನೆ. ಆ ಪ್ರಕಾರ ಯುವತಿ ತನ್ನ ಸಂಪಾದನೆಯ ಹಣ, ಸ್ನೇಹಿತರಿಂದ ಸಾಲದ ರೂಪದಲ್ಲಿ ತೆಗೆದುಕೊಂಡ ಹಣ ಸೇರಿಸಿ 22 ಲಕ್ಷದ 54 ಸಾವಿರ ರೂಪಾಯಿಯನ್ನ ಅಕೌಂಟ್ ನಂಬರ್ ಗೆ ಡಿಪಾಸಿಟ್ ಮಾಡಿದ್ದಾರೆ.

ಆನಂತರದಲ್ಲಿ ಹಲವು ದಿನಗಳು ಕಳೆದರು ತನ್ನನ್ನು ಮದುವೆಯಾಗೋದಾಗಿ ನಂಬಿಸಿದ್ದ ವ್ಯಕ್ತಿಯಿಂದ ಕರೆ ಬರಲಿಲ್ಲ. ಆತನ ಮತ್ತು ಆತನ ಸೋದರಿಯರ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಆಗಿತ್ತು. ಆನಂತರವೇ ಯುವತಿಗೆ ತಾನು ಮೋಸ ಹೋಗಿರುವ ವಿಚಾರ ಗೊತ್ತಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...