alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣ ನಿಗದಿ ಪಡಿಸಿದ ಶಾಲೆ…!

ಪುಣೆಯ ಮೇಯರ್ ಎಂಐಟಿ ಶಾಲೆಯೊಂದರ ನಿಯಮ ಪಾಲಕರ ತಲೆ ನೋವಿಗೆ ಕಾರಣವಾಗಿದೆ. ಶಾಲೆ ನಿಯಮವನ್ನು ವಿರೋಧಿಸಿ ಪಾಲಕರು ಪ್ರತಿಭಟನೆ ನಡೆದಿದ್ದಾರೆ. ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣ ಸೇರಿದಂತೆ ಸ್ಕರ್ಟ್ ಉದ್ದದ ಬಗ್ಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ.

ಪಾಲಕರೊಬ್ಬರ ಪ್ರಕಾರ, ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣವನ್ನು ಸೀಮಿತಗೊಳಿಸಿದೆ. ವಿದ್ಯಾರ್ಥಿನಿಯರು ಬಿಳಿ ಅಥವಾ ಸ್ಕಿನ್ ಕಲರ್ ಒಳ ಉಡುಪನ್ನು ಧರಿಸಬೇಕಂತೆ. ಸ್ಕರ್ಟ್ ಉದ್ದ ಸೇರಿದಂತೆ ಶೌಚಾಲಯ ಬಳಕೆ ಸಮಯವನ್ನೂ ಶಾಲೆ ಆಡಳಿತ ಮಂಡಳಿ ನಿಗದಿಪಡಿಸಿದೆ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿಲ್ಲ. ಉತ್ತಮ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆಂದು ಶಾಲೆ ಆಡಳಿತ ಮಂಡಳಿ ಹೇಳಿದೆ. ಪಾಲಕರಿಂದ ಸಹಿ ಪಡೆದಿರುವ ಆಡಳಿತ ಮಂಡಳಿ ನಿಯಮ ಪಾಲಿಸದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...