alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಬ್ಯಾನ್ ಆದ ಬಳಿಕ ಈ ರೆಸ್ಟೋರೆಂಟ್ ಮಾಡಿದ್ದೇನು ಗೊತ್ತಾ…?

ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದೆ. ಪ್ಲಾಸ್ಟಿಕ್ ಹೆಚ್ಚು ಬಳಕೆ ಮಾಡೋದೇ ಹೊಟೇಲ್ ಗಳು, ರೆಸ್ಟೋರೆಂಟ್ ಗಳು. ಗ್ರಾಹಕರ ಪಾರ್ಸಲ್ ಆರ್ಡರ್ ಗಳಿಗಾಗಿ ಪ್ಲಾಸ್ಟಿಕ್ಸ್ ಬಾಕ್ಸ್ ಮತ್ತು ಪೇಪರ್ ಗಳನ್ನ ಹೊಟೇಲ್ ಉದ್ದಿಮೆದಾರರು ಬಳಕೆ ಮಾಡ್ತಾರೆ. ಆದ್ರೆ ಪುಣೆಯ ರೆಸ್ಟೋರೆಂಟ್ ಒಂದು ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ನಂತರ ಗ್ರಾಹಕರಿಗೆ ಲಂಚ್ ಬಾಕ್ಸ್ ನಲ್ಲಿ ಆಹಾರವನ್ನು ಪಾರ್ಸೆಲ್ ನೀಡುವ ವ್ಯವಸ್ಥೆಯನ್ನ ಶುರುಮಾಡಿದೆ.

ಸ್ಟೀಲ್ ಲಂಚ್ ಬಾಕ್ಸ್ ಗಳನ್ನ ಹೊಟೇಲ್ ನವರೇ ಗ್ರಾಹಕರಿಗೆ ನೀಡ್ತಿದ್ದಾರೆ. ಗ್ರಾಹಕರ ಟೇಕ್ ಅವೇ ಆರ್ಡರ್ ಗಳನ್ನ ಕ್ಯಾರಿಯರ್ ಗಳಲ್ಲಿಯೇ ಕಳುಹಿಸುತ್ತಿದ್ದಾರೆ. ಆಹಾರ ಸೇವಿಸಿದ ಬಳಿಕ ಆ ಕ್ಯಾರಿಯರ್ ಗಳನ್ನ ಮತ್ತೆ ರೆಸ್ಟೋರೆಂಟ್ ಗೆ ತಂದುಕೊಡುವಂತೆ ಗ್ರಾಹಕರಿಗೆ ಹೇಳ್ತಿದ್ದಾರೆ. ಇದಕ್ಕಾಗಿ ರೆಸ್ಟೋರಂಟ್ ಸಿಬ್ಬಂದಿ 200 ರೂಪಾಯಿ ಎಕ್ಸ್ಟ್ರಾ ತೆಗೆದುಕೊಳ್ತಿದ್ದಾರೆ. ಕ್ಯಾರಿಯರ್ ಮರಳಿ ತಲುಪಿದ ಬಳಿಕ ಆ 200 ರೂಪಾಯಿಯನ್ನ ಗ್ರಾಹಕರಿಗೆ ವಾಪಸ್ ನೀಡ್ತಿದ್ದಾರೆ.

ರೆಸ್ಟೋರೆಂಟ್ ಸಿಬ್ಬಂದಿಯ ಈ ಸಾಮಾಜಿಕ ಕಳಕಳಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ಅಂತಿದ್ದಾರೆ ರೆಸ್ಟೋರೆಂಟ್ ಮಾಲೀಕರು. ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ 1200 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗ್ತಿತ್ತು. ಹಾಗಾಗಿ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ, ಬಳಕೆ ಮತ್ತು ಸರಬರಾಜನ್ನ ಸಂಪೂರ್ಣವಾಗಿ ನಿಷೇಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...