alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಈ ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿ…!

ಪುಣೆಯಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಪುಣೆಯಲ್ಲೀಗ 36.2 ಲಕ್ಷ ವಾಹನಗಳಿವೆ. ಆದರೆ ಅಲ್ಲಿನ ಜನಸಂಖ್ಯೆ ಕೇವಲ 35 ಲಕ್ಷ.

ಪುಣೆ ಆರ್ ಟಿ ಓ (ಎಂ ಹೆಚ್- 12) ಪ್ರಕಾರ 2017-18 ರ ಆದಾಯದ ನಿರೀಕ್ಷೆ 862 ಕೋಟಿ ರೂಪಾಯಿಗಳಾಗಿತ್ತು. ಆದರೆ ಬಂದಿರುವ ಆದಾಯ 1021.60 ಕೋಟಿ ಆಗಿದೆ. ಅಂದರೆ ನಿರೀಕ್ಷಿಸಿದ್ದ ಆದಾಯಕ್ಕಿಂತ ಶೇ. 18 ರಷ್ಟು ಹೆಚ್ಚು ಆದಾಯ ಬಂದಿದೆ.

2017-18 ರಲ್ಲಿ 4 ವೀಲ್ಹರ್ ರಿಜಿಸ್ಟ್ರೇಶನ್ ಶೇ. 9.5ರಷ್ಟು, 2 ವೀಲ್ಹರ್ ರಿಜಿಸ್ಟ್ರೇಶನ್  ಶೇ.8.24 ರಷ್ಟು ಹಾಗೂ ಟ್ಯಾಕ್ಸಿ, ಕ್ಯಾಬ್ ಗಳ ಸಂಖ್ಯೆ ಶೇ. 25 ರಷ್ಟು ಹೆಚ್ಚಾಗಿದೆ.

ಸದ್ಯ ಪುಣೆಯಲ್ಲಿ 2 ವೀಲ್ಹರ್ ಗಳ ಸಂಖ್ಯೆ 27 ಲಕ್ಷವಾದರೆ, 4 ವೀಲ್ಹರ್ ಗಳ ಸಂಖ್ಯೆ 6.45 ಲಕ್ಷವಾಗಿದೆ. ಇದರಿಂದಾಗಿ ಪುಣೆಯಲ್ಲಿನ್ನು ವಾಹನ ದಟ್ಟಣೆ, ಟ್ರಾಫಿಕ್ ಕಿರಿಕಿರಿ ಹೆಚ್ಚಾಗೋದ್ರಲ್ಲಿ ಸಂಶಯವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...