alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮ ಸರಪಂಚ್ ಆಗಿ ಆಯ್ಕೆಯಾದ 94 ವರ್ಷದ ವೃದ್ದೆ

gangubai94 ವರ್ಷದ ವೃದ್ದೆಯೊಬ್ಬರು ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಲ್ಲದೇ ಇದೀಗ ಗ್ರಾಮ ಸರಪಂಚ್ ಆಗುವ ಮೂಲಕ ದಾಖಲೆ ಮಾಡಿದ್ದಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾಂಬೂರ್ವಾಡಿ ಗ್ರಾಮದ ಗಂಗೂಬಾಯಿ, ಕಳೆದ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಪದವೀಧರೆಯಾಗಿದ್ದ ಮಹಿಳೆಯೊಬ್ಬರ ವಿರುದ್ದ ಸ್ಪರ್ಧಿಸಿ, 50 ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇದೀಗ ಸರಫಂಚ್ ಆಗಿ ಆಯ್ಕೆಯಾಗಿರುವ ಗಂಗೂಬಾಯಿ, ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದ್ದಾರಲ್ಲದೇ ಕೆಲವೊಂದು ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಈ ವಯಸ್ಸಿನಲ್ಲೂ ಬೆಳಿಗ್ಗೆ 5 ಗಂಟೆಗೆ ಏಳುವ ಗಂಗೂಬಾಯಿ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಮಿತಾಹಾರ ಸೇವನೆಯೇ ತಮ್ಮ ಆರೋಗ್ಯದ ಗುಟ್ಟು ಎನ್ನುವ ಗಂಗೂಬಾಯಿ ಈಗಲೂ ಲವಲವಿಕೆಯಿಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...