alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಹಚ್ಚಿದ್ರೆ 500, ಬಾಳೆ ಹಣ್ಣು ತರದಿದ್ರೆ 100, ಪ್ರತಿ ಕೆಲಸಕ್ಕೂ ದಂಡ ವಿಧಿಸ್ತಾನೆ ಪತಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪತಿಯ ವರ್ತನೆಯಿಂದ ಮಹಿಳೆ ಜೀವನ ಶೋಚನೀಯವಾಗಿದೆಯಂತೆ.

14 ವರ್ಷಗಳ ಹಿಂದೆ ಮಹಿಳೆಯ ಪ್ರೇಮ ವಿವಾಹ ನಡೆದಿತ್ತು. ಈಗ ಪತಿ ವರ್ತನೆಗೆ ಬೇಸತ್ತ ಮಹಿಳೆ ಪತಿಯಿಂದ ಬಿಡುಗಡೆ ಬಯಸಿದ್ದಾಳೆ. ಪತಿ ಎಲ್ಲದಕ್ಕೂ ದಂಡ ವಿಧಿಸುತ್ತಿದ್ದಾನಂತೆ. ಮಾರುಕಟ್ಟೆಯಿಂದ ಬಾಳೆಹಣ್ಣು ತಂದಿಲ್ಲವೆನ್ನುವ ಕಾರಣಕ್ಕೆ 100 ರೂಪಾಯಿ ದಂಡ ವಿಧಿಸುತ್ತಾನಂತೆ. ಮನೆಯಲ್ಲಿ ಟಿವಿ ಹಚ್ಚಿದ್ರೆ 500 ರೂಪಾಯಿ ದಂಡ ನೀಡಬೇಕಂತೆ. ಮಕ್ಕಳನ್ನು ಟ್ಯೂಷನ್ ನಿಂದ ಕರೆತರಲು ವಿಳಂಬವಾದ್ರೆ 2 ಸಾವಿರ ರೂಪಾಯಿ ದಂಡ ನೀಡಬೇಕಂತೆ. ಮನೆಯ ಯಾವುದೇ ಕರೆಂಟ್ ಸ್ವಿಚ್ ಆನ್ ಆಗಿದ್ರೆ 50 ರೂಪಾಯಿ ನೀಡಬೇಕಂತೆ.

ಹೊಟೇಲ್ ಮ್ಯಾನೇಜ್ಮೆಂಟ್ ಮುಗಿಸಿರುವ ಮಹಿಳೆ ಪತಿ ಅನಿಲ್ 1 ಲಕ್ಷ 10 ಸಾವಿರ ರೂಪಾಯಿ ತಿಂಗಳ ಸಂಬಳ ಪಡೆಯುತ್ತಾನಂತೆ. ಪುಣೆಯಲ್ಲಿ ಮೂರು ಫ್ಲಾಟ್ ಕೂಡ ಇದೆಯಂತೆ. ಮದುವೆ ನಡೆದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತಂತೆ. ನಂತ್ರ ಅನಿಲ್ ಪತ್ನಿ ಶ್ವೇತಾಗೆ ಚಿತ್ರಹಿಂಸೆ ನೀಡುತ್ತಿದ್ದನಂತೆ. ಶ್ವೇತಾ ಬಳಿಯಿದ್ದ ವಸ್ತುಗಳನ್ನೆಲ್ಲ ತೆಗೆದುಕೊಂಡು ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...