alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿಯರಿಗೆ ಖುಷಿ ಸುದ್ದಿ: ಶೇ.50 ರಷ್ಟು ಕಡಿಮೆ ಬೆಲೆಗೆ ಸಿಗಲಿದೆ ದ್ವಿದಳ ಧಾನ್ಯ

ಗೋಧಿ ಹಾಗೂ ಅಕ್ಕಿಯಂತೆ ಪಡಿತರ ಅಂಗಡಿಯಲ್ಲಿ ದ್ವಿದಳ ಧಾನ್ಯಗಳು ಸಿಗಲಿವೆ. ಎಲ್ಲ ಸರಿಯಾದ್ರೆ ಶೀಘ್ರವೇ ಪಡಿತರ ಅಂಗಡಿಯಲ್ಲಿ ದ್ವಿದಳ ಧಾನ್ಯ ಸಿಗಲಿದೆ. ಈ ವರ್ಷದ ಕೊನೆಯೊಳಗೆ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರ ದೇಶದ 200 ಜಿಲ್ಲೆಯ ಪಡಿತರ ಅಂಗಡಿಯಲ್ಲಿ ದ್ವಿದಳ ಧಾನ್ಯ ಮಾರಾಟ ಮಾಡಲು ಮುಂದಾಗಿದೆ. ಪೌಷ್ಟಿಕಾಂಶ ವಿಚಾರದಲ್ಲಿ ಹಿಂದಿರುವ ಜಿಲ್ಲೆಗಳ ಹೆಸರನ್ನು ಕೇಂದ್ರ ಸರ್ಕಾರ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಕೇಂದ್ರದ ಮುಂದೆ ಎರಡು ಸವಾಲುಗಳಿವೆ. ಒಂದು ಕಡೆ ದ್ವಿದಳ ಧಾನ್ಯದ ಸಂಗ್ರಹ ಹೆಚ್ಚಿದೆ. ಇನ್ನೊಂದು ಕಡೆ ಅಪೌಷ್ಟಿಕತೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಇಂಥ ಪರಿಸ್ಥಿತಿಯಲ್ಲಿ ಪಡಿತರ ಅಂಗಡಿ ಸಹಾಯ ಪಡೆದು ಪೌಷ್ಟಿಕಾಂಶ ಕೊರತೆಯಿರುವ ಪ್ರದೇಶಗಳಿಗೆ ದ್ವಿದಳ ಧಾನ್ಯ ತಲುಪಿಸುವ ಕೆಲಸಕ್ಕೆ ಮುಂದಾಗಿದೆ. ಶೇಕಡಾ 50ರಷ್ಟು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಪಡಿತರ ಅಂಗಡಿಯಲ್ಲಿ ದ್ವಿದಳ ಧಾನ್ಯ ಲಭ್ಯವಾಗಲಿದೆ. ಪ್ರತಿ ತಿಂಗಳು 2 ಕೆ.ಜಿ. ದ್ವಿದಳ ಧಾನ್ಯ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಚುನಾವಣೆಗೂ ಮುನ್ನ ಈ ಯೋಜನೆ ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದ್ರಿಂದ 7 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ.  8 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಈ ಯೋಜನೆಗೆ ಮೀಸಲಿಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...