alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….ನೆಲದ ಮೇಲೆ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಇದು ಪರೀಕ್ಷಾ ಸಮಯ. ವರ್ಷವಿಡಿ ಓದಿದ್ದನ್ನು ವಿದ್ಯಾರ್ಥಿಗಳು ಕೇವಲ 3 ಗಂಟೆಗಳ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗುತ್ತದೆ. ಮೊದಲೇ ಪರೀಕ್ಷಾ ಭಯ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ ನಲ್ಲಿ ಅವ್ಯವಸ್ಥೆ ಎದುರಾದರೆ ಹೇಗಿರಬೇಡ?

ಇಂತದೊಂದು ಘಟನೆ ಪಂಜಾಬ್ ನ ರಾಯ್ಕೋಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ನಡೆದಿದೆ. ಈ ಶಾಲೆಯನ್ನು 12 ನೇ ತರಗತಿ ಪರೀಕ್ಷೆ ನಡೆಸುವ ಸಲುವಾಗಿ ಸೆಂಟರ್ ಆಗಿ ಆಯ್ಕೆ ಮಾಡಿದ್ದು, ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳೇ ಇರಲಿಲ್ಲವೆನ್ನಲಾಗಿದೆ. ಮೊದಲ ದಿನ ಇಂಗ್ಲೀಷ್ ಪತ್ರಿಕೆ ಬರೆಯಲು ಬಂದ ವಿದ್ಯಾರ್ಥಿಗಳು ಅಲ್ಲಿನ ಅವ್ಯವಸ್ಥೆ ಕಂಡು ಕಂಗಾಲಾಗಿದ್ದಾರೆ.

ಎಲ್ಲ ವಿದ್ಯಾರ್ಥಿಗಳಿಗೂ ಬೆಂಚ್ ಹಾಗೂ ಡೆಸ್ಕ್ ಸಾಕಾಗದ ಕಾರಣ ಕೆಲ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಶಾಲಾ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದಾಗ, ನಮ್ಮ ಶಾಲೆಯಲ್ಲಿ ಡೆಸ್ಕ್ ಕೊರತೆಯಿರುವ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಹೇಗಾದರೂ ನಿಭಾಯಿಸಿ ಎಂದು ಹೇಳಿದ ಮೇರೆಗೆ ಕೊನೆಗೆ ಈ ವ್ಯವಸ್ಥೆ ಮಾಡಿದೆವು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...