alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಪಿಎಫ್ ಪೋರ್ಟಲ್ ಹ್ಯಾಕ್-2.7 ಕೋಟಿ ಜನರ ಡೇಟಾ ಕಳ್ಳತನ?

ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಆನ್ಲೈನ್ ಸೇವಾ ಕೇಂದ್ರ (ಸಿಎಸ್ಸಿ)ದ ಮೂಲಕ ನೀಡ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದೆ. ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದ್ದು. ಅಂತಿಮ ವರದಿ ಬರುವವರೆಗೆ ಸೇವೆ ನಿಲ್ಲಿಸುವುದಾಗಿ ಇ ಪಿ ಎಫ್ ಒ ಹೇಳಿದೆ. ಇದೇ ವೇಳೆ ಸರ್ಕಾರಿ ವೆಬ್ಸೈಟ್ ನಿಂದ ಡೇಟಾ ಸೋರಿಕೆಯಾಗಿದೆ ಎಂಬ ಆರೋಪವನ್ನು ಇ ಪಿ ಎಫ್ ಒ ತಳ್ಳಿಹಾಕಿದೆ.

ಇ ಪಿ ಎಫ್ ಒ ಪೋರ್ಟಲ್ ಹ್ಯಾಕ್ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ  ಕೇಂದ್ರ ಭವಿಷ್ಯ ನಿಧಿ ಕಮಿಷನರ್ ಪತ್ರ ಬರೆದಿದ್ದಾರೆ. ಸಿಎಸ್ಸಿ ಮೂಲಕ ನಡೆಯುವ ಪೋರ್ಟಲ್ aadhaar.epfoservices.comನಿಂದ ಹ್ಯಾಕರ್ ಗಳು ಡೇಟಾಗಳನ್ನು ಕದ್ದಿದ್ದಾರೆ. ನೌಕರರ ಮಾಹಿತಿಯನ್ನು ಅವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.

ನೌಕರರ ಭವಿಷ್ಯ ನಿಧಿಯಲ್ಲಿ 2.7 ಕೋಟಿ ಸದಸ್ಯರ ಮಾಹಿತಿಯಿದೆ. ಈ ಎಲ್ಲ ಮಾಹಿತಿ ಅಪಾಯದಲ್ಲಿದೆ ಎಂಬ ಆತಂಕ ಮನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಿಷನರ್ ಇದೊಂದು ಸಾಮಾನ್ಯ ಎಚ್ಚರಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದಲೇ ಸಿಎಸ್ಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಡೇಟಾ ಸೋರಿಕೆ ಇನ್ನೂ ದೃಡಪಟ್ಟಿಲ್ಲ. ಡೇಟಾ ರಕ್ಷಣೆ ಹಾಗೂ ಸಂರಕ್ಷಣೆಗಾಗಿ ಮುಂಚಿತವಾಗಿಯೇ ಪೋರ್ಟಲ್ ಸೇವೆ ರದ್ದು ಮಾಡಲಾಗಿದೆ. ತನಿಖೆ ಪೂರ್ಣಗೊಂಡ ನಂತ್ರ ಸೇವೆ ಮತ್ತೆ ಶುರುವಾಗಲಿದೆ ಎಂದು ಕಮಿಷನರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...