alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಮಗಳಿಗಾಗಿ ಗ್ರಾಹಕರನ್ನು ಹುಡುಕಿ ತರ್ತಾರೆ ಪಾಲಕರು

sex-mandi

ವೇಶ್ಯಾವಾಟಿಕೆ ಬಗ್ಗೆ ಸಾಕಷ್ಟು ಸುದ್ದಿಗಳು ಆಗಾಗ ಬರ್ತಾ ಇರುತ್ತವೆ. ಯಾವುದೇ ಹುಡುಗಿ ಕೂಡ ಈ ಜಾಲದಲ್ಲಿ ಬೀಳಲು ಇಷ್ಟಪಡುವುದಿಲ್ಲ. ಕೆಲವೊಂದು ಅನಿವಾರ್ಯತೆ ಅವರನ್ನು ಈ ನರಕಕ್ಕೆ ತಳ್ಳುತ್ತದೆ. ಆದ್ರೆ ನಾವು ಈಗ ಹೇಳುವ ಸುದ್ದಿ ಆಘಾತವನ್ನುಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ಪಾಲಕರು ಮಕ್ಕಳ ರಕ್ಷಣೆಗೆ ನಿಲ್ತಾರೆ. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳ ಉತ್ತಮ ಭವಿಷ್ಯಕ್ಕೆ ದುಡಿಯುತ್ತಾರೆ. ಆದ್ರೆ ಮಧ್ಯಪ್ರದೇಶದ ನಿಮಚ್ ಜಿಲ್ಲೆಯ ಬಚಡಾ ಸಮುದಾಯದಲ್ಲಿ ಮಾತ್ರ ಹುಡುಗಿಯರಿಗೆ ತಂದೆ, ತಾಯಿಯೇ ವಿಲನ್. ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವ ಪೋಷಕರು, ಪಗ್ರಾಹಕರ ಜೊತೆ ವ್ಯವಹಾರ ಕುದುರಿಸುತ್ತಾರೆ.

ಈ ವಿಷಯ ಅದೇ ಸಮುದಾಯದ ಒಂದು ಹುಡುಗಿಯಿಂದ ಬಹಿರಂಗವಾಗಿದೆ. ಆಕೆ ಈ ಗೂಡಿನಿಂದ ಹೊರಬಂದು ಪ್ರೀತಿಸಿದವನ ಜೊತೆ ಮದುವೆಯಾಗಿದ್ದಾಳೆ. ಆದ್ರೆ ಪೋಷಕರ ಕಡೆಯಿಂದ ಬೆದರಿಕೆ ಕರೆಗಳು ಬರ್ತಾ ಇವೆ. ರಕ್ಷಣೆಗಾಗಿ ಪೊಲೀಸ್ ಮೊರೆ ಹೋದ ಹುಡುಗಿ ಸಮುದಾಯದ ಕಠೋರ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

ಹುಡುಗಿ ಪ್ರಕಾರ, ಅಪ್ರಾಪ್ತ ಬಾಲಕಿಯರನ್ನೂ ಈ ವ್ಯವಹಾರಕ್ಕೆ ತಳ್ತಾ ಇದ್ದಾರಂತೆ. ಅಲ್ಲಿಂದ ಹೊರಬರಲು ಅನೇಕ ಹುಡುಗಿಯರು ಚಡಪಡಿಸ್ತಿದ್ದಾರಂತೆ. ಆದ್ರೆ ಪೋಷಕರ ಭಯ ಅವರನ್ನು ಹಿಡಿದಿಟ್ಟಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...