alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ದಂಧೆಯ ಆಘಾತಕಾರಿ ಅಂಶ ಬಯಲು

ದೇಶದಲ್ಲಿ ವೇಶ್ಯಾವಾಟಿಕೆ ದಂಧೆ ಒಂದು ಬೃಹತ್ ಉದ್ಯಮದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಕಾರ್ಪೋರೇಟ್ ಉದ್ಯಮದಂತಿರುವ ಇದನ್ನು ಕಂಡು ಪೊಲೀಸರೇ ದಂಗು ಬಡಿದು ಹೋಗಿದ್ದಾರೆ.

ಈ ಹಿಂದೆಲ್ಲಾ ಕೆಲವೊಂದು ಲಾಡ್ಜ್ ನಲ್ಲಿಯೋ, ಮನೆಯಲ್ಲಿ ಅಥವಾ ರಸ್ತೆ ಬದಿಯಲ್ಲೋ ನಡೆಯುತ್ತಿದ್ದ ವ್ಯವಹಾರ ಈಗ ಆನ್ ಲೈನ್ ಹಾಗೂ ಮೊಬೈಲ್ ಫೋನ್ ಗಳ ಮೂಲಕ ಹೈಟೆಕ್ ಆಗಿ ನಡೆಯುವಂತೆ ಪರಿವರ್ತನೆಯಾಗಿದೆ.

ಇದರಿಂದಾಗಿ ಒಂದು ರಾಜ್ಯದಲ್ಲಿ ಈ ದಂಧೆಯಲ್ಲಿ ತೊಡಗಿರುವ ಯುವತಿಯರು ಕೆಲ ತಿಂಗಳುಗಳ ಬಳಿಕ ಮತ್ತೊಂದು ರಾಜ್ಯಕ್ಕೆ ತೆರಳಿ ವೇಶ್ಯಾವಾಟಿಕೆ ದಂಧೆ ಮಾಡುವುದು ನಡೆದಿದೆ ಎಂಬಂಶವೂ ಬೆಳಕಿಗೆ ಬಂದಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯುವತಿಯರನ್ನು ಕಳುಹಿಸುವ ಮುನ್ನ ಈ ದಂಧೆಯಲ್ಲಿರುವವರು ಕಾರ್ಪೋರೇಟ್ ಉದ್ಯಮದ ರೀತಿ ಅವರ ಸಂದರ್ಶನವನ್ನು ಆನ್ ಲೈನ್ ಅಥವಾ ಟೆಲಿಫೋನ್ ಮೂಲಕ ನಡೆಸುತ್ತಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...