alex Certify
ಕನ್ನಡ ದುನಿಯಾ       Mobile App
       

Kannada Duniya

‘ಆರ್ಟ್ ಆಫ್ ಲಿವಿಂಗ್’ ಪ್ರೋಗ್ರಾಂಗೆ ಗ್ರೀನ್ ಸಿಗ್ನಲ್

ravi guru

‘ಆರ್ಟ್ ಆಫ್ ಲಿವಿಂಗ್’ನ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ದೆಹಲಿ ಸಮೀಪ ಯಮುನಾ ನದಿ ತೀರದಲ್ಲಿ ಇದೇ ಮಾರ್ಚ್ 11 ರಿಂದ 13 ರವರೆಗೆ ನಡೆಯಲಿರುವ ‘ವಿಶ್ವ ಸಂಸ್ಕೃತಿ ಉತ್ಸವ’ಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಡಳಿ ಸಮ್ಮತಿಸಿದೆ.

ಅಲ್ಲದೇ, ‘ಆರ್ಟ್ ಆಫ್ ಲಿವಿಂಗ್’ ಫೌಂಡೇಷನ್ ಗೆ 5 ಕೋಟಿ ರೂಪಾಯಿ ದಂಡ ವಿಧಿಸಿದೆ. ಜೊತೆಗೆ, ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೂ ದಂಡ ವಿಧಿಸಲಾಗಿದೆ. ಕಾರ್ಯಕ್ರಮ ಆರಂಭವಾಗುವ ಮೊದಲೇ ದಂಡವನ್ನು ಕಟ್ಟಬೇಕೆಂದು ನ್ಯಾಯಾಧೀಕರಣ ಸೂಚನೆ ನೀಡಿದೆ. ಯಮುನಾ ನದಿ ದಂಡೆಯಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನದಿಯೂ ಕಲ್ಮಶವಾಗುತ್ತದೆ ಎಂದು ಪರಿಸರವಾದಿ ಸಂಘಟನೆಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು.

ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು, ಯಮುನಾ ನದಿಯಲ್ಲಿ ತೇಲುವ ಸೇತುವೆ ನಿರ್ಮಾಣಕ್ಕೆ ಅನುಮತಿ ಹೇಗೆ ನೀಡಲಾಗಿದೆ ಎಂದು ನವದೆಹಲಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಆಡಳಿತದ ಮುಖ್ಯಸ್ಥರಿಗೆ ಪ್ರಶ್ನಿಸಿದರು. ಕೊನೆಗೆ ವಿಚಾರಣೆ ನಂತರ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...