alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರಪ್ರದೇಶ ಚುನಾವಣೆಯಲ್ಲಿ ‘ಕೈ’ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ..?

priyanka-gandhi

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೈ ಪಾಳಯ ಸಿದ್ಧತೆ ಶುರು ಮಾಡಿದೆ. ಈ ಬಾರಿ ಕಾಂಗ್ರೆಸ್ ನ ಟ್ರಂಪ್ ಕಾರ್ಡ್ ಪ್ರಿಯಾಂಕಾ ಗಾಂಧಿ. ಯುಪಿ ಚುನಾವಣೆಯಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಅಂತಾ ಕಾಂಗ್ರೆಸ್ ನಾಯಕರೇ ಹೇಳ್ತಿದ್ದಾರೆ. ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಮಾಡೋದಂತೂ ಗ್ಯಾರಂಟಿ, ಸಮಯ ಸಿಕ್ಕಲ್ಲಿ ರಾಜ್ಯದ 403 ಕ್ಷೇತ್ರಗಳಲ್ಲೂ ಪ್ರಿಯಾಂಕಾ ಮತಯಾಚಿಸಲಿದ್ದಾರಂತೆ. ಇದಕ್ಕವರು ಸಮ್ಮತಿ ಸೂಚಿಸಿದ್ದಾರೆ ಅಂತಾ ಪಕ್ಷದ ಮುಖಂಡ ರಾಜ್ ಬಬ್ಬರ್ ತಿಳಿಸಿದ್ದಾರೆ.

ಚುನಾವಣಾ ದಿನಾಂಕ ನಿಗದಿಯಾದ ಮೇಲಷ್ಟೆ ಕ್ಯಾಂಪೇನ್ ರೂಪುರೇಷೆಯನ್ನು ಕಾಂಗ್ರೆಸ್ ಸಿದ್ಧಮಾಡಲಿದೆ. ಪ್ರಿಯಾಂಕಾ ಗಾಂಧಿ ಉಪಸ್ಥಿತಿಯಿಂದ ಪಕ್ಷಕ್ಕೆ ಹೆಚ್ಚು ಆತ್ಮವಿಶ್ವಾದ ಮತ್ತು ಬಲ ಬರಲಿದೆ ಅಂತಾ ಕೈ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಈವರೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಲ್ಲಿ ಮಾತ್ರ ಪ್ರಿಯಾಂಕಾ ಪ್ರಚಾರ ಮಾಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...