alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಮ್ಲಾದಲ್ಲಿ ಅಂತೂ ನಿರ್ಮಾಣವಾಯ್ತು ಪ್ರಿಯಾಂಕ ಗಾಂಧಿ ಮನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಗಳು ಪ್ರಿಯಾಂಕ ಗಾಂಧಿ ಕನಸಿನ ಮನೆ ಪೂರ್ಣಗೊಂಡಿದೆ. ಶಿಮ್ಲಾದಿಂದ 9 ಕಿಲೋಮೀಟರ್ ದೂರದಲ್ಲಿ ಪ್ರಿಯಾಂಕ ಗಾಂಧಿ ಮನೆ ಕಟ್ಟಿಸಿದ್ದಾರೆ.

2007ರಲ್ಲಿಯೇ ಪ್ರಿಯಾಂಕಾ ಗಾಂಧಿ ಛರಾಬಡಾದ ಕಾಡಿನ ಬಳಿ ಮನೆ ಕಟ್ಟಿಸುವ ಪ್ಲಾನ್ ತಯಾರಿಸಿದ್ದರು. ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ನಾಯಕರು ಭೂಮಿ ಪತ್ತೆ ಮಾಡಿದ್ದರು. ಎಲ್ಲ ನೋಂದಣಿ ವ್ಯವಹಾರ ಪೂರ್ಣಗೊಂಡ ಬಳಿಕ ಪ್ರಿಯಾಂಕ 2008 ರಲ್ಲಿ ಮನೆ ಕಟ್ಟುವ ಕೆಲಸ ಪ್ರಾರಂಭಿಸಿದ್ದರು.

2011 ರಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣವಾಗ್ತಿತ್ತು. ಆದ್ರೆ ಪ್ರಮುಖ ಮನೆ ನಿರ್ಮಾಣ ಕಂಪನಿ ಕೆಲಸ ಪ್ರಿಯಾಂಕ ಮನಸಿಗೆ ಬರಲಿಲ್ಲ. ಹಾಗಾಗಿ ಕೆಲಸವನ್ನು ನಿಲ್ಲಿಸಿದ್ದರು. ಈ ಮಧ್ಯೆ ಬಿಜೆಪಿ ಶಾಸಕ ಸುರೇಶ್ ಭಾರದ್ವಾಜ್ ಪ್ರಿಯಾಂಕ ಮನೆ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಪತ್ರವೊಂದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗ ಪ್ರಿಯಾಂಕ ಮನೆ ಮತ್ತಷ್ಟು ಸುದ್ದಿಗೆ ಬಂದಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆಗೆ ದಕ್ಕೆಯಾಗುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯಬೇಕೆಂದು ಪತ್ರದಲ್ಲಿ ಹೇಳಿದ್ದರು. ಇಷ್ಟರ ಮಧ್ಯೆಯೇ ಪ್ರಿಯಾಂಕ ಮನೆ ನಿರ್ಮಾಣವಾಗಿದೆ.   ಆಗಾಗ ಶಿಮ್ಲಾಗೆ ಹೋಗ್ತಿದ್ದ ಸೋನಿಯಾ ಗಾಂಧಿ ಮನೆ ನಿರ್ಮಾಣ ಕಾರ್ಯವನ್ನು ವೀಕ್ಷಿಸುತ್ತಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...