alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ 9 ದಿನ ರಜೆ ನೀಡಲು ಶಾಲೆಗಳ ವಿರೋಧ

ಗುಜರಾತಿನ ವಿಜಯ್ ರೂಪಾನಿ ಸರ್ಕಾರ ನವರಾತ್ರಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ 9 ದಿನಗಳ ಕಾಲ ರಜೆ ನೀಡುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶಕ್ಕೆ ಮುಖ್ಯಮಂತ್ರಿ ತವರು ರಾಜ್ಕೋಟ್ ನಲ್ಲಿ ವಿರೋಧ ವ್ಯಕ್ತವಾಗಿದೆ. ಸೋಮವಾರ 400 ಶಾಲಾ ಆಡಳಿತ ಮಂಡಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

ನವರಾತ್ರಿಯಲ್ಲಿ 9 ದಿನಗಳ ಕಾಲ ಶಾಲೆಗೆ ರಜೆ ನೀಡಿದ್ರೆ ವಿದ್ಯಾಭ್ಯಾಸ ಹಿಂದೆ ಬೀಳುತ್ತದೆ ಎಂದು ಆಡಳಿತ ಮಂಡಳಿ ಹೇಳ್ತಿದೆ. ವರ್ಷದ 365 ದಿನಗಳಲ್ಲಿ 210 ದಿನಗಳ ಕಾಲ ಮಾತ್ರ ಶಾಲೆ ನಡೆಯುತ್ತದೆ. ಮತ್ತೆ 9 ದಿನ ನವರಾತ್ರಿ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಸಿಕ್ಕಿದ್ರೆ ವಿಧ್ಯಾಭ್ಯಾಸ ಕಷ್ಟವಾಗುತ್ತದೆ ಎಂದು ಆಡಳಿತ ಮಂಡಳಿ ಸದಸ್ಯರು ಹೇಳಿಕೆ ನೀಡಿದ್ದಾರೆ.

ಕೃಷ್ಣಾಷ್ಠಮಿಗೆ ರಜೆ ನಂತ್ರ ಪರೀಕ್ಷೆ. ಆ ನಂತ್ರ ದೀಪಾವಳಿ ರಜೆ. ಮಧ್ಯೆ ಸಿಗುವ ಸ್ವಲ್ಪ ಸಮಯದಲ್ಲಿ ನವರಾತ್ರಿ ರಜೆ ಬಂದ್ರೆ ಮಕ್ಕಳು ಶಾಲೆಗೆ ಬರುವ ಬದಲು ಮನೆಯಲ್ಲಿರುವುದು ಸೂಕ್ತ ಎನ್ನುತ್ತಿದ್ದಾರೆ ಶಾಲೆ ಆಡಳಿತ ಮಂಡಳಿ ಸದಸ್ಯರು.

ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ರಜೆ ನೀಡುವ ಜೊತೆಗೆ ಶಾಲೆಗಳ ಶಿಕ್ಷಣದ ಮಟ್ಟವನ್ನು ಹೆಚ್ಚಿಸಬೇಕು. ರಜೆ ನೀಡುವ ಮೊದಲು ಶಾಲೆ-ಕಾಲೇಜು ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಬೇಕು ಎಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...