alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದವಳಿಗೆ ಜಾಬ್ ಆಫರ್

ಹಿಮಾಚಲ ಪ್ರದೇಶದ ಹರ್ಮೀಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಹಮೀರ್ಪುರ ಜಿಲ್ಲಾ ಜೈಲಿನಲ್ಲಿ ಹತ್ಯೆ ಪ್ರಕಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಹಿಳೆಗೆ ಸ್ಥಳೀಯ ಕಂಪನಿಯೊಂದು ಉದ್ಯೋಗ ನೀಡಲು ಮುಂದಾಗಿದೆ.

ಜೈಲಿನಲ್ಲಿರುವ ಖೈದಿಗೆ ಜಾಬ್ ಆಫರ್ ನೀಡಿದ ಮೊದಲ ಘಟನೆ ಇದು. ಖಾಸಗಿ ಕಂಪನಿ ಮಹಿಳೆಗೆ ಜವಾನ ಹುದ್ದೆ ಆಫರ್ ಮಾಡಿದೆ. ತಿಂಗಳಿಗೆ 7 ಸಾವಿರ ರೂಪಾಯಿ ಸಂಬಳ ನೀಡಲಿದೆಯಂತೆ. ಸೋಮವಾರ ಜೈಲಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಖೈದಿಗಳಿಗೆ ಅವ್ರ ಅರ್ಹತೆಗೆ ತಕ್ಕ ಕೆಲಸ ಸಿಗಬೇಕೆಂಬುದು ನಮ್ಮ ಆಶಯ. ಇದಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖೈದಿಗಳು ಅರ್ಹತೆಗೆ ತಕ್ಕ ಕೆಲಸ ಮಾಡುವುದ್ರಿಂದ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ ಶಿಕ್ಷೆ ಮುಗಿದ ಮೇಲೆ ಹೊರ ಜಗತ್ತು ಅವ್ರನ್ನು ನೋಡುವ ದೃಷ್ಠಿಕೋನ ಬದಲಾಗುತ್ತದೆ ಎಂಬುದು ಜೈಲಧಿಕಾರಿಗಳ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...