alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡರ್ನ್ ಆಯ್ತು ಜೈಲು: ಸುಲಭವಾಯ್ತು ಕೈದಿಗಳ ಕೆಲಸ

ಇನ್ಮುಂದೆ ಜೈಲಿನಲ್ಲಿ ಬೆವರು ಸುರಿಸಿ ಕೈದಿಗಳು ರೊಟ್ಟಿ ತಯಾರಿಸಬೇಕಾಗಿಲ್ಲ. ಉತ್ತರ ಪ್ರದೇಶ ಸರ್ಕಾರ ಕೈದಿಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ರೋಗಿಗಳ ಆರೋಗ್ಯ ಕಾಪಾಡಲು ಮಾಡ್ಯುಲರ್ ಕಿಚನ್ ಶುರು ಮಾಡಿದೆ.

ಉತ್ತರ ಪ್ರದೇಶದ 26 ಜಿಲ್ಲೆಗಳ ಕಾರಾಗೃಹದಲ್ಲಿ ಮಾಡ್ಯುಲರ್ ಕಿಚನ್ ಶುರು ಮಾಡಲಾಗಿದೆ. ಕೈದಿಗಳ ಆರೋಗ್ಯ ಪದೇ ಪದೇ ಹದಗೆಡುತ್ತಿದೆ ಎಂಬ ಸುದ್ದಿ ಸಿಕ್ಕಿತ್ತು. ಕೈದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರ ಮಾಡ್ಯುಲರ್ ಕಿಚನ್ ಮೊರೆ ಹೋಗಿದೆ.

ಈ ಹೊಸ ವ್ಯವಸ್ಥೆಯಿಂದ ಕೈದಿಗಳು ರೊಟ್ಟಿ ತಯಾರಿಸಲು ಬೆವರು ಸುರಿಸಬೇಕಾಗಿಲ್ಲ. ಈಗ ಒಂದು ಗಂಟೆಯಲ್ಲೇ ಸಾವಿರ ರೊಟ್ಟಿಗಳನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಲಕ್ನೋ, ಗೋರಕ್ಪುರ, ವಾರಣಾಸಿ, ಮೀರತ್, ದೆಹಲಿ ಮತ್ತು ಆಗ್ರಾ ಸೇರಿದಂತೆ 26 ಜಿಲ್ಲೆಗಳ ಕೈದಿಗಳು ಮಾಡ್ಯುಲರ್ ಕಿಚನ್ ನಲ್ಲಿ ಅಡುಗೆ ತಯಾರಿಸುತ್ತಿದ್ದಾರೆ. ರೊಟ್ಟಿ ತಯಾರಿಸುವುದ್ರಿಂದ ಹಿಡಿದು ತರಕಾರಿ ಕತ್ತರಿಸುವವರೆಗೆ ಎಲ್ಲ ಕೆಲಸವನ್ನೂ ಮಶಿನ್ ಮಾಡುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...