alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಬಾಲಕನಿಗೆ ಅಶ್ಲೀಲ ಚಿತ್ರ ತೋರಿಸುತ್ತಿದ್ದ ಪ್ರಾಂಶುಪಾಲ

ಮಕ್ಕಳಿಗೆ ಶಿಕ್ಷಣ ಬೋಧಿಸಿ, ಉತ್ತಮ ಮಾರ್ಗದಲ್ಲಿ ಸಾಗುವಂತೆ ದಾರಿ ತೋರಬೇಕಾದ ಶಿಕ್ಷಕನೇ ಅನಾಚಾರ ಮಾಡಿದರೆ?

14 ವರ್ಷದ ವಿದ್ಯಾರ್ಥಿಗೆ ಅಶ್ಲೀಲ ಚಿತ್ರ ತೋರಿಸಿದ ಪುಣೆ ಶಾಲೆಯ ಪ್ರಾಂಶುಪಾಲನೊಬ್ಬ ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಈ ವಿಷಯವನ್ನು ಶಾಲಾ ಕೌನ್ಸೆಲರ್‌ ಬಳಿ ಹೋಗಿ ಆ ಬಾಲಕ ದೂರಿದರೆ, ಆತ ನೆರವಾಗುವ ಬದಲು, ಘಟನೆ ಬಗ್ಗೆ ಯಾರಿಗೂ ಹೇಳದೆ, ಮೌನವಾಗಿರಬೇಕೆಂದು ಬೆದರಿಕೆ ಹಾಕಿದ್ದಾನೆ.

ಬಳಿಕ 9ನೇ ತರಗತಿಯ ಬಾಲಕ ಮನೆಗೆ ಹೋಗಿ ಪೋಷಕರ ಬಳಿ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾನೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಾಂಶುಪಾಲ ಹಾಗೂ ಶಾಲಾ ಕೌನ್ಸೆಲರ್ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ಬಾಲಕ ಆ ಶಾಲೆಗೆ ತಾನು ಹೋಗುವುದಿಲ್ಲ ಎನ್ನುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...