alex Certify
ಕನ್ನಡ ದುನಿಯಾ       Mobile App
       

Kannada Duniya

30 ನೇ ‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು..?

mann-ki-ba

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ 30 ನೇ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಮಾರ್ಚ್ 26 ಬಾಂಗ್ಲಾ ದೇಶ ವಿಮೋಚನೆಯಾದ ದಿನ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಬಾಂಗ್ಲಾದೇಶಕ್ಕೆ ಶುಭಾಶಯಗಳು. ಬಾಂಗ್ಲಾ ಭಾರತದ ಮಿತ್ರ ರಾಷ್ಟ್ರವಾಗಿದೆ. ಅಭಿವೃದ್ಧಿಯಲ್ಲಿ ಜೊತೆಗಾರನಾಗಿದೆ. ಬಾಂಗ್ಲಾದ ರಾಷ್ಟ್ರಗೀತೆ ರವೀಂದ್ರನಾಥ ಠಾಗೂರರ ಕೃತಿಯಾಗಿದೆ ಎಂದು ಹೇಳಿದ್ದಾರೆ.

ಮಾರ್ಚ್ 23 ಭಗತ್ ಸಿಂಗ್ ಬಲಿದಾನದ ದಿನವಾಗಿದೆ. ಭಗತ್ ಸಿಂಗ್ ಮತ್ತು ಅವರ ಸಂಗಡಿಗರು ಬ್ರಿಟಿಷ್ ಸರ್ಕಾರವನ್ನೇ ನಡುಗಿಸಿದ್ದರು. ನವ ಯುವಕರು ಅವರ ಬಗ್ಗೆ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ನವಭಾರತ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ. 2022 ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಗಲಿದ್ದು ಈ ವೇಳೆಗೆ ನವಭಾರತ ನಿರ್ಮಾಣವಾಗಬೇಕಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆಯಾಗಿದೆ. ಮಾನಸಿಕ ಖಿನ್ನತೆ ಈ ವರ್ಷದ ಥೀಮ್ ಆಗಿದೆ. ವಿಶ್ವದಲ್ಲಿ ಸುಮಾರು 35 ಕೋಟಿ ಜನ ಡಿಪ್ರೆಷನ್ ಗೆ ಒಳಗಾಗಿದ್ದಾರೆ. ಇದರಿಂದ ಹೊರ ಬರಲು ಯೋಗ ಸಹಕಾರಿಯಾಗಿದೆ. ಜೂನ್ ನಲ್ಲಿ 3 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಯುಗಾದಿ ಶುಭಾಶಯಗಳನ್ನು ಕೋರಿದ ಮೋದಿ, 1.5 ಕೋಟಿ ಜನ ಭೀಮ್ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡಬೇಕಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...