alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಎರಡು ದಿನ ವಾರಣಾಸಿಯಲ್ಲಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಲಿದ್ದಾರೆ. ಎರಡು ದಿನಗಳ ಕಾಲ ವಾರಣಾಸಿಯಲ್ಲಿ ತಂಗಲಿರುವ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ದುರ್ಗಾ ಪೂಜೆ ಮೂಲಕ ಕಾರ್ಯಕ್ರಮ ಶುರು ಮಾಡಲಿರುವ ಮೋದಿ ಎರಡನೇ ದಿನ ಗೋಪೂಜೆ ಮೂಲಕ ದಿನ ಆರಂಭಿಸಲಿದ್ದಾರೆ.

ಕೆಲ ಯೋಜನೆಗಳ ಆರಂಭದ ಜೊತೆಗೆ ವಿಕಾಸ ಅವರ ಮೊದಲ ಆದ್ಯತೆ ಎಂಬುದನ್ನು ಕಾಶಿ ಜನರಿಗೆ ಸಾರಲಿದ್ದಾರೆ. ಸೆಪ್ಟೆಂಬರ್ 23ರಂದು ಐದು ಹಸುಗಳ ಪೂಜೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಶು ಆರೋಗ್ಯ ಮೇಳವೆಂದು ಹೆಸರಿಡಲಾಗಿದೆ. ಹಸುಗಳ ಪೂಜೆ ಮಾಡುವ ಮೂಲಕ ಮೋದಿ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿ ಈ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಗುಜರಾತಿನಲ್ಲಿ ಈ ಮೇಳಕ್ಕೆ ಮೋದಿ ಚಾಲನೆ ನೀಡಿದ್ದರು.

ಶುಕ್ರವಾರ ಮಧ್ಯಾಹ್ನ 1 ಗಂಟೆ 25 ನಿಮಿಷಕ್ಕೆ ಮೋದಿ ದೆಹಲಿ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ರಾತ್ರಿ 8 ಗಂಟೆಗೆ ದುರ್ಗಾ ಪೂಜೆ ಮಾಡಲಿರುವ ಮೋದಿ ಪಕ್ಷದ ಕಾರ್ಯಕರ್ತರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...