alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಪ್ರವಾಸಕ್ಕೆ ಪ್ರಧಾನಿ ಮೋದಿ ಸಜ್ಜು….

MODI CHINAಚೀನಾ ಹಾಗೂ ವಿಯೆಟ್ನಾಂ ಪ್ರವಾಸಕ್ಕೆ ಪ್ರಧಾನಿ ಮೋದಿ ಸರ್ವ ಸನ್ನದ್ಧರಾಗಿದ್ದಾರೆ. ಇಂದು ನವದೆಹಲಿಯಿಂದ ವಿಯೆಟ್ನಾಂಗೆ ತೆರಳಲಿದ್ದಾರೆ, ಅಲ್ಲಿಂದ ನಾಳೆ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಸೆಪ್ಟೆಂಬರ್ 4 ಮತ್ತು 5 ರಂದು ಚೀನಾದ Hangzhou ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಫಲಪ್ರದವಾದ ಮತ್ತು ಉತ್ತಮ ಫಲಿತಾಂಶದಾಯಕ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.

ಎಲ್ಲ ಸವಾಲುಗಳನ್ನು ಎದುರಿಸುವುದು ಮತ್ತು ಅಂತರಾಷ್ಟ್ರೀಯ ಬದ್ಧತೆ ಬಗ್ಗೆ ವಿಶ್ವ ನಾಯಕರೊಂದಿಗೆ ಭಾರತ ಚರ್ಚೆ ನಡೆಸಲಿದೆ. ಇಂದು ವಿಯೆಟ್ನಾಂನ ಹನೊಯ್ ಗೆ ಭೇಟಿ ನೀಡಲಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಇದು ಸಹಕಾರಿಯಾಗಲಿದೆ ಅಂತಾ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದನೆ ನಿಗ್ರಹ, ತೆರಿಗೆ ಕಡಿತ, ಪ್ರಮುಖ ಔಷಧಗಳಿಗೆ ಮಾರುಕಟ್ಟೆ ಲಭ್ಯತೆ ಮುಂತಾದ ವಿಷಯಗಳನ್ನು ಜಿ-20 ಶೃಂಗಸಭೆಯಲ್ಲಿ ಭಾರತ ಪ್ರಸ್ತಾಪ ಮಾಡಲಿದೆ. ವಿಯೆಟ್ನಾಂ ಹಾಗೂ ಚೀನಾ ಭೇಟಿ ಬಳಿಕ ಸೆಪ್ಟೆಂಬರ್ 5 ರಂದು ಪ್ರಧಾನಿ ಮೋದಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...